SHARE

ಬೆಳಗಾವಿ: ಫಾರೆಸ್ಟನವರು ಗಿಡ ನೆಡುವುದಿಲ್ಲ ಬಿಡ್ರಿ.. ಎಂಬ ಸಾರ್ವಜನಿಕರ ಮತ್ತು ಜನಪ್ರತಿನಿಧಿಗಳ ಅಪವಾದ ಮೆಟ್ಟಿ ನಿಂತು ಒಂದೇ ವರ್ಷದಲ್ಲಿ ದುಪ್ಪಟ್ಟು ಸಸೀಕರಣಕ್ಕೆ ರಾಜ್ಯಾದ್ಯಂತ ಸಜ್ಜಾಗುವಂತೆ ಸಚಿವ ಸತೀಶ ಜಾರಕಿಹೊಳಿ ಅರಣ್ಯಾಧಿಕಾರಿಗಳನ್ನು ಬಡಿದೆಬ್ಬಿಸಿದ್ದಾರೆ.

₹200ಕೋಟಿ ಆದಾಯ ಮಾತ್ರ ಹೊಂದಿರುವ ಇಲಾಖೆಗೆ, ಕೋಟ್ಯಾಂತರ ಬೆಲೆ ಬಾಳುವ ಅರಣ್ಯ ಭೂಮಿ ಇದೆ. ಇಂಥದ್ದೆ ಎನ್ನುವುದಕ್ಕಿಂದ ವಾಣಿಜ್ಯ ಮಹತ್ವದ ಗಿಡಗಳನ್ನೂ ಸಹ ಬೆಳೆಯಿರಿ ಎಂದು ಸಲಹೆ ನೀಡಿದರು. ರಾಜ್ಯಾದ್ಯಂತ ಅರಣ್ಯ ಇಲಾಖೆಗೆ ಸಂಬಂಧಿಸಿದ ಎಲ್ಲ ಅರಣ್ಯ ರಹಿತ ಜಮೀನು ಅರಣ್ಯ ಮಾಡಬೇಕು ಎಂದು ಸಚಿವರು ಸೂಚಿಸಿದ್ದಾರೆ. ಬಜೆಟನಲ್ಲಿ ಅರಣ್ಯ ಇಲಾಖೆಗೆ ಹೆಚ್ಚುವರಿ ಅನುದಾನ ಕೇಳಿದ್ದೇನೆ. ಸರಕಾರ ಹಣ ಕೊಟ್ಟರೆ ಹಸಿರೀಕರಣಕ್ಕೆ ಅರಣ್ಯ ಇಲಾಖೆ ರಾಜ್ಯಾದ್ಯಂತ ಸಜ್ಜಾಗಬೇಕು ಎಂದರು. ಅರಣ್ಯ ಇಲಾಖೆಯನ್ನು ಜನ ನೋಡುವ ದೃಷ್ಟಿ ಬದಲಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು. ಸಸೀಕರಣ ಆದದ್ದು ಪೋಷಣೆ ಆಗದೇ ನಾಶವಾಗುತ್ತಿರುವ ಬಗ್ಗೆ ಸಕಾರಣಗಳನ್ನು ವೈಜ್ನಾನಿಕ ತಳಹದಿಯಲ್ಲಿ ಕಂಡುಹಿಡಿಯಬೇಕು ಎಂದು ಸಲಹೆ ನೀಡಿದರು. ಮುಂಬರುವ ಮಾನ್ಸೂನ್ ವೇಳೆಗೆ ಅರಣ್ಯ ಇಲಾಖೆಯಲ್ಲಿ ಹಸಿರು ಕ್ರಾಂತಿ ಆಗಬೇಕು. ಕಾನೂನಿನ ಅಡಿ ಇಲಾಖೆ ಹೊಸ ಚಿಂತನೆಗಳತ್ತ ತಿರುಗಬೇಕು ಎಂದರು. ಅರಣ್ಯ ಇಲಾಖೆಯಿಂದ ಯಾವುದೇ ಲಾಭ ಇಲ್ಲ ಎಂದು ಸರಕಾರಗಳು ನಮಗೆ ಹಣ ಕೊಡುವುದು ಕಡಿಮೆ. ಆದುದರಿಂದ ಅರಣ್ಯ ಬೆಳೆಸಿ, ಪರಿಸರ ಕಾಪಾಡಿ ಜತೆಗೆ ಇಲಾಖೆಗೆ ಸ್ವ- ಆದಾಯ ವೃದ್ಧಿಗೆ ಚಿಂತನೆ ಮಾಡಿ ಎಂದು ಸಚಿವರು ಸಲಹೆ ನೀಡಿದರು.

APCCF ಗಳಾದ ಅಜಯ ಮಿಶ್ರಾ, ಪುಣಿತ ಪಾಠಕ, ಆರ್. ಕೆ. ಸಿಂಗ್, ರಾಧಾದೇವಿ ಹಾಗೂ ಸಿಸಿಎಫ್ ಕರುಣಾಕರಣ, ಡಿಸಿಎಫ್ ಎಂ. ವಿ. ಅಮರನಾಥ ಹಾಗೂ ಧಾರವಾಡ ಬೆಳಗಾವಿ ವೃತ್ತದ ಡಿಸಿಎಫ್ ಗಳು ಹಾಜರಿದ್ದರು.