SHARE

ಬೆಳಗಾವಿ: ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮದವರಾಗಿದ್ದ ಇಲ್ಲಿನ ಶಹಾಪುರ ಠಾಣೆಯ ಪೆದೆ ದುಂಡಯ್ಯ ಶಿವಲಿಂಗಯ್ಯ ಮುನ್ನವಳ್ಳಿಮಠ(೩೭) ಬುಧವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ಬೆಳಗಾವಿ ಶಹಾಪುರ ಪೊಲೀಸ್ ಠಾಣೆಯಲ್ಲಿ ಕಳೆದ ಎರಡು ವರ್ಷಗಳಿಂದ ಪಿಸಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಮೃತರಿಗೆ ತಂದೆ-ತಾಯಿ, ಐವರು ಸಹೋದರಿಯರು ಸೇರಿದಂತೆ ಅಪಾರ ಬಂಧು-ಬಳಗ ಇದ್ದಾರೆ.