SHARE

ಬೆಳಗಾವಿ: ಇಂದಿನ ಬಜೆಟ್ ಅಧಿವೇಶನಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಕಾಂಗ್ರೆಸ್ ಇಬ್ಬರು ಶಾಸಕರಿಗೆ ವಿಪ್ ಜಾರಿ ಮಾಡಲಾಗಿದೆ. ಅಥಣಿ ಶಾಸಕ ಮಹೇಶ ಕಮಟಳ್ಳಿ ಹಾಗೂ ಡಾ. ಮಹೇಶ ಜಾಧವ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಪತ್ರ ಬರೆದು ವಿಪ್ ಜಾರಿಗೊಳಿಸಿದ್ದು ಇಬ್ಬರೂ ಶಾಸಕರ ಶಾಸಕರ ಭವನದ ಕೊಠಡಿಗೆ ಅಂಟಿಸಲಾಗಿದೆ. ಅಧಿವೇಶನಕ್ಕೆ ಹಾಜರಾಗದಿದ್ದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ಸಹ ನೀಡಲಾಗಿದೆ. ಗೋಕಾಕ ಶಾಸಕ ರಮೇಶ ಜಾರಕಿಹೊಳಿ ತಮಗೆ ಆರೋಗ್ಯ ಸರಿ ಇಲ್ಲದ ಬಗ್ಗೆ ಸ್ಪೀಕರ್ ರಮೇಶಕುಮಾರ ಅವರಿಗೆ ಪತ್ರ ಬರೆದು ಕೋರಿದ್ದಾರೆ.