SHARE

ಬೆಳಗಾವಿ: ವಿಪ್ ಉಲ್ಲಂಘಿಸಿದ ಆರೋಪದ ಮೇಲೆ ಕಾಂಗ್ರೆಸ್ ಬಂಡಾಯ ಶಾಸಕರಿಗೆ ಮತ್ತೆ ನೊಟೀಸ್ ನೀಡಲಾಗಿದೆ. ಗೋಕಾಕ ಶಾಸಕ ರಮೇಶ ಜಾರಕಿಹೊಳಿ, ಡಾ. ಉಮೇಶ ಜಾಧವ, ಮಹೇಶ ಕಮಠೊಳ್ಳಿ ಅವರಿಗೆ ನೊಟೀಸ್ ನೀಡಲಾಗಿದೆ. ಈ ಪೈಕಿ ರಮೇಶ ಜಾರಕಿಹೊಳಿ ಮತ್ತು ಡಾ. ಉಮೇಶ ಜಾಧವ ಅವರನ್ನು ಪಕ್ಷ ಮತ್ತು ಶಾಸಕತ್ವದಿಂದ ಕಿಕ್ ಔಟ್ ಮಾಡಲು ಕಾಂಗ್ರೆಸ್ ಸಜ್ಜುಗೊಂಡಿದೆ.