SHARE

ಬೆಳಗಾವಿ: ಸರ್ಕಾರದಿಂದ ಪ್ರಪ್ರಥಮ ಬಾರಿಗೆ ಆಕರ್ಷಕ ಕುಸ್ತಿ ಹಬ್ಬಕ್ಕೆ ಇಂದು ಮೇಯರ್ ಬಸಪ್ಪ ಚಿಕ್ಕಲದಿನ್ನಿ ಚಾಲನೆ ನೀಡಿದರು. ಇಂದಿನಿಂದ ನಾಲ್ಕು ದಿನಗಳ ಕಾಲ ನಡೆಯುವ ಕುಸ್ತಿ ಹಬ್ಬ ಮೇರೆ ಮೀರಲಿದೆ. ಕುಂದಾನಗರಿ ಬೆಳಗಾವಿಯ ಜಿಲ್ಲಾ ಕ್ರೀಡಾಂಗಣ ಕುಸ್ತಿ ಹಬ್ಬಕ್ಕೆ ಸಾವಿರಾರು ಆಸಕ್ತರು ಆಗಮಿಸುತ್ತಿದ್ದಾರೆ.ಉದ್ಘಾಟನೆ ಮಾಡಬೇಕಿದ್ದ ಕ್ರೀಡಾ ಸಚಿವ ರಹೀಮ ಖಾನ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಗೈರು ಗಮನ ಸೆಳೆಯಿತು. ಮಧ್ಯಾಹ್ನ 3ಗಂಟೆಗೆ ಉದ್ಘಾಟನೆಗೊಳ್ಳಬೇಕಿದ್ದಲ ಕಾರ್ಯಕ್ರಮ ಒಂದೂವರೆ ಗಂಟೆ ತಡವಾಗಿ ಉದ್ಘಾಟನೆ‌ ಆಯಿತು. ಬೃಹತ್ ಕುಸ್ತಿ ಪಂದ್ಯ ವೀಕ್ಷಣೆಗೆ ನಿರೀಕ್ಷಿತ ಮಟ್ಟದಲ್ಲಿ ಜನ ಆಗಮಿಸದಿರುವುದು ಗಮನ ಸೆಳೆದಿದೆ. ಮಹಿಳಾ ಹಾಗೂ ಪುರುಷರ ಕುಸ್ತಿ ಪಂದ್ಯಗಳು ಆಕರ್ಷಣೆ ನೀಡಿವೆ. ಬೆಂಗಳೂರು ವಿಧಾನಸಭೆ ಅಧಿವೇಶನ ಇರುವುದರಿಂದ ಸಚಿವರು ಗೈರಾದ ಮಾಹಿತಿ ಲಭ್ಯವಾಯಿತು.