SHARE

ಬೆಳಗಾವಿ: ಫೆ. 21ರಿಂದ 24ರವರೆಗೆ ನಾಲ್ಕು ದಿನ 3ನೇ ಏಷಿಯನ್ ರೋಲ್ ಬಾಲ್ ಚಾಂಪಿಯನ್ ಶಿಪ್ ನಗರದ ಶಿವಗಂಗಾ ರೋಲರ್ ಸ್ಕೇಟಿಂಗ್ ರಿಂಕನಲ್ಲಿ ನಡೆಯಲಿದೆ.
ಇಂದು ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಸಂಸ್ಥೆಯ ಅಧ್ಯಕ್ಷೆ ಜ್ಯೋತಿ ಚಿಂಡಕ್ ಕರ್ನಾಟಕ ರೋಲ್ ಬಾಲ್ ಅಸೋಸಿಯೇಶನ್ ಮತ್ತು ರೋಲ್ ಬಾಲ್ ಫೆಡರೇಷನ್ ಆಫ್ ಇಂಡಿಯಾ ಸಹಯೋಗ ನೀಡಿವೆ.

ಓಮನ್, ಸೌದಿ ಅರೇಬಿಯಾ, ಯೇಮನ್, ಯುಎಇ, ಮಾಲ್ಡೀವ್ಸ್, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ಭೂತಾನ, ಕಾಂಬೋಡಿಯ ಸೇರಿ ಇತರ ದೇಶಗಳ 300ಕ್ಕೂ ಹೆಚ್ಚು ಸ್ಕೇಟರ್ಸ್ ಭಾಗವಹಿಸಲಿದ್ದಾರೆ ಎಂದರು. ಫೆ. 20ಕ್ಕೆ ಪ್ಲೇಯರ್ಸ್ ನಗರಕ್ಕೆ ಆಗಮಿಸಲಿದ್ದು, ಫೆ. 21ರ ಸಂಜೆ 4ಕ್ಕೆ ಕಾರ್ಯಕ್ರಮ ಉದ್ಘಾಟನೆ ಆಗಲಿದೆ. ಪ್ರತಿದಿನ ಸಂಜೆ 4:30ರಿಂದ ರಾತ್ರಿ 11ರವರೆಗೆ ಪಂದ್ಯಗಳು ನಡೆಯಲಿವೆ.
ಸಿನಿ ಸ್ಟಾರ್ಸ್, ಸಿಂಗರ್ಸ್, ಪಾಲಿಟಿಶಿಯನ್ಸ್ ಮತ್ತು ಸೋಶಿಯಲ್ ವರ್ಕರ್ಸ್ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಒಟ್ಟು 15 ದೇಶಗಳು ಭಾಗವಹಿಸಲಿವೆ ಎಂದರು.