SHARE

ಬೆಳಗಾವಿ: ಹುಲಿ ಸಾಮಿಪ್ಯ ಸಾಧಿಸಿ ಸೇಫ್ ಆಗಿ ಮನೆ ಸೇರಿದ ಯುವಕ ಈಗ ಸಾಹಸಿಗನಾಗಿ ಗುರುತಿಸಿಕೊಂಡಿದ್ದಾನೆ. ಇತ್ತೀಚೆಗೆ ಕಾರವಾರ ಜಿಲ್ಲೆಯ ಕುಮಟಾ ಸಿದ್ಧಾಪುರ ರಸ್ತೆಯಲ್ಲಿ ಕಾರು ನಿಲ್ಲಿಸಿ ರಸ್ತೆಗಿಳಿದಿದ್ದ ಯುವಕರಿಗೆ ಹುಲಿರಾಯ ಎದುರಾಗಿ ರಸ್ತೆ ದಾಟಿದ್ದಾನೆ! ಕೆಲವೇ ಅಡಿಗಳಂತರದಲ್ಲಿ ಇವರೂ ಸಹ ಮೊಬೈಲ್ ಕ್ಲಿಕ್ಕಿಸಿದ್ದಾರೆ. ಅದೃಷ್ಟವಷಾತ್ ಹುಲಿ ಸುಮ್ಮನೆ ತೆರಳಿದೆ. ಕೆರಳಿ ಒಂದೇ ನೆಗೆತ ನೆಗೆದಿದ್ದರೆ ಹುಲಿಗೆ ಒಂದು ವಾರದ ಆಹಾರದ ಚಿಂತೆ ಇರಲಿಲ್ಲ ಎಂಬುವುದು ಗಮನಾರ್ಹ!

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಯರಗಟ್ಟಿ ರೈನಾಪುರದ ಯುವ ಉದ್ಯಮಿ ಹರೀಶ ಕರಗನ್ನವರ ಹುಲಿ ಸಾಮಿಪ್ಯ ಕಂಡವನು. ಗಾಬರಿ ಬಿದ್ದು ಓಡಿದ್ದರೆ, ಇಲ್ಲವೇ ಶಬ್ದ ಮಾಡಿದ್ದರೆ ನಖ ಶಿಖಾಂತ ಹುಲಿ ಹರಿದು ಹಾಕುತ್ತಿತ್ತು ಎಂಬ ಭಯ ಅವರಿಗೆ ಆ ನಂತರ ಪ್ರಜ್ಞೆಗೆ ಬಂದಿದೆ. ಹುಲಿ ರಕ್ಷಿತಾರಣ್ಯ ಪ್ರದೇಶಗಳಲ್ಲಿ ವಾಹನಗಳು ಸಾವಕಾಶ ತೆರಳಬೇಕು, ಯಾವುದೇ ಕಾರಣಕ್ಕೂ ರಸ್ತೆ ಮೇಲೆ ವಾಹನ ಬಿಟ್ಟು ಇಳಿಯುವುದು ಅಪಾಯಕಾರಿ, ಪ್ರಾಣಿಗಳ ಫೋಟೊ ಕ್ಲಿಕ್ಕಿಸುವುದು ತುಂಬಾ ಅಜಾಗರೂಕ ಕ್ರಮ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.