SHARE

ಬೆಳಗಾವಿ: ರಾಜಕೀಯ ವೈಷಮ್ಯಕ್ಕೆ ಗ್ರಾ.ಪಂ. ಸದಸ್ಯ‌ ಬನ್ನೆಪ್ಪಾ ಪಾಟೀಲ ಕೊಲೆ ಪ್ರಕರಣದ ಆರೋಪಿತರನ್ನು ಮಂಗಳವಾರ ಆರು‌ ಜನರನ್ನು ಕಾಕತಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರ‌‌ ಸಂಖ್ಯೆ‌ ಇಂದು 10ಕ್ಕೆ ಏರಿದ್ದು, ಹೊಸ ವಂಟಮೂರಿ ಗ್ರಾಮದ ಮಾರುತಿ ಸತ್ಯಪ್ಪಾ ವನ್ನೂರಿ, ಪೆದ್ದಪ್ಪಾ ಬನ್ನಪ್ಪಾ ಪಾಟೀಲ, ಕೆಂಪಣ್ಣಾ ಪೆದ್ದಪ್ಪಾ ಪಾಟೀಲ, ರಾಯಪ್ಪಾ ಮಾರುತಿ ವನ್ನೂರಿ, ಲಗಮಪ್ಪಾ ಬನ್ನೆಪ್ಪಾ ಪಾಟೀಲ, ರಾಯಪ್ಪಾ ಯಲ್ಲಪ್ಪಾ ವನ್ನೂರಿ ಬಂಧಿತರು.

ಬೆಳಗಾವಿ ತಾಲೂಕು ಹೊಸ ವಂಟಮೂರಿ ಗ್ರಾಮದಲ್ಲಿ ಕಳೆದ 2018 ಡಿಸೇಂಬೆರನಲ್ಲಿ ಗ್ರಾಮದ ಗ್ರಾ.ಪಂ. ಸದಸ್ಯ ಬನ್ನೆಪ್ಪಾ ಪಾಟೀಲನನ್ನು ರಾಜಕೀಯ ವೈಷಮ್ಯಕ್ಕೆ ಕೊಲೆ ಮಾಡಲಾಗಿತ್ತು. ಶಿವಪ್ಪ ವನ್ನೂರಿ ಎಂಬಾತ ತಮ್ಮ ಸಹಚರರೊಂದಿಗೆ ಸೇರಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದ ಆರೋಪ ಇದೆ. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ೧೬ ಜನರ ವಿರುದ್ದ ಪ್ರಕರಣ ದಾಖಲಾಗಿತ್ತು. ಅದರಲ್ಲಿ ೪ ಜನರನ್ನು ಬಂಧಿಸಿದ ಪೋಲಿಸರು ಇನ್ನುಳಿದ ೧೨ ಜನರ ಬಂಧನಕ್ಕೆ ಬಲೆ ಬೀಸಿದ್ದರು. ಖಚಿತ ಮಾಹಿತಿ ಆಧಾರದ ಮೇಲೆ ರಾಷ್ಟ್ರೀಯ ಹೆದ್ದಾರಿ ೪ ರಲ್ಲಿರುವ ಉಕ್ಕಡ ಗ್ರಾಮದ ಮರಾಠಾ ಮಂಡಳ ಮಹಾವಿದ್ಯಾಲಯ ಹಿಂದಿರುವ ಹಾಳು ಮನೆಯಲ್ಲಿ ಅವಿತು ಕುಳಿತಿದ್ದ ೬ ಜನ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲಿಸ್ ಇನ್ಸ್ಪೆಕ್ಟರ್ ಶ್ರೀಶೈಲ ಕೌಜಲಗಿ, ಪಿಎಸ್ಐ ಅರ್ಜುನ ಹಂಚಿನಮನಿ, ಕೆ. ಅಡಿವೆಪ್ಪ ಪಾಲ್ಗೊಂಡಿದ್ದರು.