SHARE

ಬೆಳಗಾವಿ: ಅರೆಸೇನಾಪಡೆ(CRPF) ಯೋಧರ ಮೇಲೆ ಭಯೋತ್ಪಾದಕ ದಾಳಿ ಖಂಡಿಸಿ ಬೆಳಗಾವಿ ಬಾರ್ಅ ಸೋಸಿಯೇಷನ್ ಕಲಾಪ ಬಹಿಷ್ಕರಿಸಿ ಇಂದು ನಗರ ಹೃದಯಭಾಗದಲ್ಲಿ ಮೆರವಣಿಗೆ ನಡೆಸಿತು.ನೂರಾರು ವಕೀಲರು ಇಂದು ಬೋಗಾರವೆಸ್, ಕಿರ್ಲೋಸ್ಕರ್ ರೋಡ್, ಸಮಾದೇವಿ ಗಲ್ಲಿ, ಖಡೇಬಜಾರ್, ಬಸ್ ನಿಲ್ದಾಣ, ಆರ್ ಟಿ ಓ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ನಡೆಸಿ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದರು. ಕೇಂದ್ರ ಸರಕಾರ ದುಷ್ಟರನ್ನು ಸೆದೆ ಬಡೆಯಬೇಕು, ಹುತಾತ್ಮ ಯೋಧರ ಬಲಿದಾನ ವ್ಯರ್ಥವಾಗಬಾರದು ಎಂದು ಆಗ್ರಹಿಸಿದರು. ಸಂಸದ ಸುರೇಶ ಅಂಗಡಿ, ಶಾಸಕ ಅನಿಲ ಬೆನಕೆ, ಪರಿಷತ್ ಸದಸ್ಯ ಹನಮಂತ ನಿರಾನಿ ಸೇರಿದಂತೆ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಗಮನ ಸೆಳೆಯಿತು.