SHARE

ಬೆಳಗಾವಿ: ಕಾಂಗ್ರೆಸ್ ಸರಕಾರದ ಆಳ್ವಿಕೆಯಿಂದ ಭ್ರಷ್ಟಾಚಾರವು ಎಷ್ಟೇ ತೊಳೆದರು ಶುಚಿಯಾಗದಷ್ಟು ಆಳವಾಗಿ ಬೇರುರಿ ಬಿಟ್ಟಿದೆ ಅದನ್ನು ಬುಡ ಸಮೇತ ಕಿತ್ತೊಗೆಯಲು ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರಲೇ ಬೇಕು ಎಂದು ಉತ್ತರ ಪ್ರದೇಶದ ಉಪ ಮುಖ್ಯ ಮಂತ್ರಿ ಕೇಶವ ಪ್ರಸಾದ ಮೌರ್ಯ ಗುಡುಗಿದರು.
ಇಂದು ಬೆಳಗಾವಿಯಲ್ಲಿ ಬೆಜಿಪಿಯಿಂದ ಹಮ್ಮಿಕೊಂಡ ಶಕ್ತಿಕೇಂದ್ರ ಪ್ರಮುಖರ ಸಮಾವೇಶದಲ್ಲಿ ಮಾತನಾಡಿದ ಅವರು ಉಗ್ರರ ದಾಳಿಗೆ ಬಲಿಯಾದ ಹುತಾತ್ಮ ಯೋಧರನ್ನು ಸ್ಮರಿಕೊಂಡು ತಮ್ಮ ಭಾಷಣ ಪ್ರಾರಂಭಿಸಿದರು. ದೇಶದಲ್ಲಿ ಮೊದಲ ಬಾರಿಗೆ ಒಂದು ಸರಕಾರ ಸ್ವಚ್ಚ ಮತ್ತು ಉತ್ತಮ ಅಧಿಕಾರವನ್ನು ನಡೆಸಿದೆ ಎಂದರೆ ಅದು ಬಿಜೆಪಿ ಸರಕಾರವಾಗಿದೆ. ಕಳೆದ ೈದು ವರ್ಷಗಳಲ್ಲಿ ಪ್ರಧಾನಿ ಮೋದಿ ಮಾಡಿದ ಕಾರ್ಯಗಳಿಂದ ಜಗತ್ತೆ ತಲೆ ಎತ್ತಿ ನೋಡುವಂತಾಗಿದೆ. ಎಲ್ಲರ ಅಭಿವೃದ್ಧಿಯ ಕನಸು ಕಂಡಿರುವ ಮೋದಿಜಿ ಮೇಲ್ವರ್ಗದ ಬಡವರಿಗೆ ಶೇ 10% ರಷ್ಟು ಮಿಸಲಾತಿ ನೀಡಲಾಗಿದೆ, ದೇಶದ ಪ್ರತಿಯೊಬ್ಬರು ಮನೆ ಹೊಂದಬೇಕು ಎನ್ನುವುದು ಪ್ರಧಾನಿ ಅವರ ಬಹು ದೊಡ್ಡ ಕನಸಾಗಿದೆ ಎಂದರು. ಮತ್ತೊಮ್ಮ ಮೋದಿ ಪ್ರಧಾನಿ ಆದರೆ ದೇಶದ ಎಲ್ಲಾ ಭ್ರಷ್ಟರು ಜೈಲಿನಲ್ಲಿ ಇರಬೇಕಾಗುತ್ತೆ ಎಂಬ ಭಯದಿಂದ ಮಹಾಘಟಬಂಧನ ರಚಿಸಲು ಮುಂದಾಗಿದ್ದಾರೆ. ಅದ್ದರಿಂದ ದೇಶದ ಜನತೆ ಎಚ್ಚೆತ್ತುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಬೆಳಗಾವಿ ಸಂಸದ ಸುರೇಶ ಅಂಗಡಿ, ರಾಜ್ಯಸಭಾ ಅಧ್ಯಕ್ಷ ಪ್ರಭಾಕರ ಕೋರೆ, ಉತ್ತರ ಶಾಸಕ ಅನೀಲ ಬೆನಕೆ, ದಕ್ಷಿಣ ಶಾಸಕ ಅಭಯ ಪಾಟೀಲ, ಸಂಜಯ ಪಾಟೀಲ, ಹಣಮಂತ ನಿರಾಣಿ, ರಾಜೇಂದ್ರ ಹರಕುಣಿ, ಈರಣ್ಣಾ ಕಡಾಡಿ, ವಿಶ್ವನಾಥ ಪಾಟೀಲ, ಮಹಾಂತೇಶ ಕವಟಗಿಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.