SHARE

ಪುಲ್ವಾಮಾ: ಪುಲ್ವಾಮಾದಲ್ಲಿ ಭಾರತೀಯ ಸೇನೆ ಮೇಲೆ ಉಗ್ರರ ದಾಳಿಯ ಮಾಸ್ಟರ್ ಮೈಂಡ್ ಘಾಜಿ ರಷೀದ್‌ ಭಾರತೀಯ ಸೇನೆ ಗುಂಡಿಗೆ ಬಲಿಯಾಗಿದ್ದಾನೆ. ಪಿಂಗ್ಲನ್ ನಲ್ಲಿ ಭಾರತೀಯ ಸೇನೆ ಸತತ 19 ಗಂಟೆಗಳ ಕಾಲ ನಡೆಸಿದ ಕಾರ್ಯಾಚರಣೆಯಲ್ಲಿ ಘಾಜಿ ರಷೀದ್‌ ನನ್ನು ಎನ್ಕೌಂಟರ್ ಮಾಡಲಾಗಿದೆ. ಈ ವೇಳೆ ನಾಲ್ಕು ಯೋಧರು ಹುತಾತ್ಮರಾಗಿದ್ದಾರೆ.

ಘಾಜಿ ರಷೀದ್‌ ಜೈಷ್​-ಇ-ಮೊಹ್ಮದ್​ ಉಗ್ರ ಸಂಘಟನೆಯ ಕಮಾಂಡರ್​, ಜೆಇಎಂ ಮುಖ್ಯಸ್ಥ ಮಸೂದ್​ ಅಜರ್​ನ ಬಂಟನಾಗಿದ್ದ ರಷೀದ್‌ ಪುಲ್ವಾಮಾ ದಾಳಿಯ ಮಾಸ್ಟರ್​ ಮೈಂಡ್​ ಎಂದು ತಿಳಿದುಬಂದಿದೆ. ಈಗ ರಷೀದ್ ನನ್ನು ಹೊಡೆದುರುಳಿಸುವ ಮೂಲಕ ಉಗ್ರರು ನಡೆಸಿದ ದಾಳಿಗೆ ಪ್ರತೀಕಾರ ತೀರಿಸುವ ಜೊತೆಗೆ ಮುಂದಾಗಬಹುದಾದ ದೊಡ್ಡ ಅಪಾಯವನ್ನು ಸೇನೆ ತಪ್ಪಿಸಿದೆ.