SHARE

ಬೆಳಗಾವಿ: ಏಷಿಯನ್ ರೋಲ್ ಬಾಲ್ ಫೆಡರೇಶನ್, ಇಂಡಿಯನ್ ಹಾಗೂ ಕರ್ನಾಟಕ ರೋಲ್ ಬಾಲ್ ಫೆಡರೇಶನ್ ಜಂಟಿಯಾಗಿ ಆಯೋಜಿಸಿರುವ ಪಂದ್ಯಗಳು ನಾಳೆ ಗುರುವಾರ ರೋಚಕ ಆರಂಭ ಪಡೆಯಲಿದೆ. ಇಂದು ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಶಿವ ಗಂಗಾ ಸ್ಕೇಟರ್ಸ್ ಅಸೋಸಿಯೇಷನ್ ಹಾಗೂ ಕರ್ನಾಟಕ ರೋಲ್ ಬಾಲ್ ಅಸೋಸಿಯೇಷನ್ ಅಧ್ಯಕ್ಷೆ ಜ್ಯೋತಿ ರಮೇಶ ಚಿಂಡಕ ನಾಳೆ ಗುರುವಾರ ಸಂಜೆ 6ಕ್ಕೆ ಶಿವಗಂಗಾ ಸ್ಜೇಟಿಗ್ ರಿಂಕನಲ್ಲಿ ಚಾಂಪಿಯನ್ ಶಿಪ್ ಗೆ ಚಾಲನೆ ಕೊಡಲಾಗುತ್ತದೆ. ಬ್ಯಾಟನ್ ರ್ಯಾಲಿ ಗುರುವಾರ ಸಂಜೆ 4ಕ್ಕೆ ಚನ್ನಮ್ಮ ವೃತ್ತದಲ್ಲಿ ಚಾಲನೆ ಪಡೆದು ಶಿವಗಂಗಾ ಸ್ಕೇಟಿಂಗ್ ರಿಂಕನಲ್ಲಿ ಸಮಾಪ್ತಿಯಾಗಿ ಪಂದ್ಯಗಳಿಗೆ ಚಾಲನೆ ಸಿಗಲಿದೆ ಎಂದರು. ಹಲವಾರು ದೇಶಗಳ ಕ್ರೀಡಾಪಟುಗಳು ನಗರದಲ್ಲಿ ನಡೆಯುವ ರ್ಯಾಲಿಯಲ್ಲಿ ಭಾಗವಹಿಸಲಿದ್ದು, ಬುಧವಾರವೇ ನಗರಕ್ಕೆ ಆಗಮಿಸಿದರು.