SHARE

ಕಲ್ಬುರ್ಗಿ: ಕರ್ನಾಟಕ ಸರ್ಕಾರ ರೈತ ವಿರೋಧಿ ಸರ್ಕಾರ, ಇಲ್ಲಿನ ಸಿಎಂ ಅವರ ರಿಮೋಟ್​ ಮತ್ತೊಬ್ಬರ ಬಳಿ ಇದೆ.
ಅವರು ಹೇಳಿದಂತೆ ಇವರು ಕೇಳಬೇಕು. ಮೈತ್ರಿಗೆ ಸರಿಯಾದ ಸಹಕಾರ ಸಿಗುತ್ತಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರ ತವರು ಕ್ಷೇತ್ರ ರಾಯಚೂರಿನಲ್ಲಿಂದು ನಡೆದ ಬಿಜೆಪಿಯ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡದೆ. ಸರ್ಕಾರ ಹಣ ನೀಡದೆ ರೈತರಿಗೆ ಮೋಸ ಎಸಗುತ್ತಿದೆ. ಆದರೆ, ಕೇಮದ್ರ ಸರ್ಕಾರ ನೇರವಾಗಿ ರೈತರ ಖಾತೆಗೆ ಹಣವನ್ನು ವರ್ಗಾವಣೆ ಮಾಡುತ್ತಿದೆ ಎಂದರು.

ಮೈತ್ರಿ ಸರ್ಕಾರದ ನನಗೆ ನಾಲ್ಕು ನಿನಗೆ ಆರು ಎಂದು ಹಂಚಿಕೊಳ್ಳುತ್ತಿದ್ದು, ಇವರು ದೇಶವನ್ನು ಹೀಗೆ ಹಂಚಿಕೊಂಡು, ಲೂಟಿ ಹೊಡೆಯುತ್ತಾರೆ. ನಿಮಗೆ ಬಹುಮತವುಳ್ಳ ಸುಭದ್ರ ಸರ್ಕಾರ ಬೇಕೋ ಅಥವಾ ದೇಶವನ್ನು ಹಂಚಿಕೊಳ್ಳುವ ಮೈತ್ರಿ ಬೇಕೋ ಯೋಚಿಸಿ ಎಂದು ಹೇಳಿದ್ದಾರೆ.

ಇವರಿಗೆ ಮೋದಿಯನ್ನು ಓಡಿಸಬೇಕು ಎಂಬ ಆಸೆಯಿದೆ. ಆದರೆ, ಮೋದಿಗೆ ಭಯೋತ್ಪಾದನೆ, ಭ್ರಷ್ಟಾಚಾರವನ್ನು ಓಡಿಸಬೇಕು ಎಂಬ ಆಸೆಯಿದೆ ಎಂದ ಅವರು, ನಿಮ್ಮ ಪ್ರಧಾನಸೇವಕ ಕರ್ನಾಟಕ ವಿಕಾಸಕ್ಕಾಗಿ ಹಲವಾರು ಕಾರ್ಯಕ್ರಗಳನ್ನು ಮಾಡುತ್ತಿದ್ದಾನೆ ಎಂದು ತಿಳಿಸಿದ್ದಾರೆ.