SHARE

ಖಾನಾಪುರ: ಹೊಸಲಿಂಗನಮಠ ಗ್ರಾಮದಲ್ಲಿದ್ದ ಲೋಕಸಭಾ ಚುನಾವಾಣೆ ನೀತಿ ಸಂಹಿತೆ ಜಾರಿಯಾಗಿದೆ ಎಂಬ ನೆಪ ಹೇಳಿ ಎಂದು ಕರವೇ ನೇತೃತ್ವದಲ್ಲಿ ಹೊಸಲಿಂಗನಮಠ ಗ್ರಾಮದಲ್ಲಿ ಹಾರಿಸಿದ ನಾಡ ಧ್ವಜವನ್ನು ಸೋಮವಾರದಂದು ಗ್ರಾಪಂ ಸಿಬ್ಬಂದಿಯವರು ತೆಗೆದು‌ಹೋಗಿದ್ದರು. ಈ ವಿಷಯಕ್ಕಾಗಿ ನಾಡ ಧ್ವಜವನ್ನು ತೆಗೆದು ಕನ್ನಡಿಗರಿಗೆ ಅವಮಾನಿಸಿದ್ದಿರಿ ಎಂದು ಲಿಂಗನಮಠ ಕರವೇ ಕಾರ್ಯಕರ್ತರು ಮಂಗಳವಾರದಂದು ಗ್ರಾಪಂ ಎದುರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯ ಸುದ್ದಿ ತಿಳಿದು, ತಕ್ಷಣ ಎಚ್ಚತ್ತುಕೊಂಡ ಸ್ಥಳಕ್ಕಾಗಮಿಸಿದ ಲಿಂಗನಮಠ ಗ್ರಾಪಂ ಪಿಡಿಒ ಚಂದ್ರ.ಬಿ.ಪಿ ಅವರು ಸ್ವತಃ ತಾವೇ ಸ್ಥಳಕ್ಕೆ ಬಂದು ಆದ ತಪ್ಪಿಗೆ ಗ್ರಾಮದ ಕನ್ನಡಿಗರಲ್ಲಿ ಕ್ಷಮೆಯಾಚಿಸಿ, ಧ್ವಜದ ಕಟ್ಟೆ ಕಂಬ ಕಟ್ಟಿಕೊಡುತ್ತೆವೆಂದು ಭರವಸೆ ನೀಡಿ ಧ್ವಜಾರೋಹಣ ನೆರೆವೆರೆಸಿದರು. ಜೋತೆಗೆ ಇಂತಹ ಘಟನೆ ಮರುಕಳಿಸದ ಹಾಗೇ ಎಚ್ಚರ ವಹಿಸುತ್ತೆನೆಂದು ವಿಶ್ವಾಸ ವ್ಯಕ್ತಪಡಿಸಿದರು.ಇಲ್ಲಿ ಲಿಂಗನಮಠ & ಹೊಸಲಿಂಗನಮಠ ಕರವೇ ಕಾರ್ಯಕರ್ತರಾದ ಮಹಾಂತೆಶ ಸಂಗೋಳ್ಳಿ, ಪಾಂಡುರಂಗ ಮಿಟಗಾರ, ಶಾಮೀರ ಹಟ್ಟಿಹೊಳಿ, ಸಂಜು ಪಾರಿಶ್ವಾಡ, ಅಬ್ದುಲ ಹಟ್ಟಿಹೊಳಿ, ಇಲಿಯಾಸ ಹಟ್ಟಿಹೊಳಿ, ಸಿದ್ದು ಕಾಜಗಾರ, ಧಾರವಾಡ ಜಿಲ್ಲಾ ಕರವೇ ಕಾರ್ಯದರ್ಶಿ ಪ್ರಭು ಹಾಗೂ ಕರವೇ ಪದಾಧಿಕಾರಿಗಳು ಹಾಜರಿದ್ದರು.