SHARE

ಖಾನಾಪುರ: ಯಸಶ್ವು ಎಂಬುದು ಏಕಮುಖ ಪ್ರಯತ್ನದಿಂದ ದಕ್ಕುವಂತಹದಲ್ಲ ಬಹುಮಕ ಪ್ರತಿಭೆಯಿಂದ ದಕ್ಕುವಂತಹದು. ಸಾಧನೆಗೆ ಅಸಾಧ್ಯವಾದದು ಯಾವುದೇ ಇಲ್ಲ ಅದನ್ನು ಸಾಧಿಸುವ ಛಲ ಮನುಷ್ಯನಿಗೆ ಬೇಕು ಎಂದು ಪತ್ರಕರ್ತ ತಿಮ್ಮಪ್ಪ ಗಿರಿಯಪ್ಪನವರ ಹೇಳಿದರು. ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಬೆಳಗಾವಿ ಹಾಗೂ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಖಾನಾಪುರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಮೊದೆಕೊಪ್ಪ ಗ್ರಾಮದಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರದಲ್ಲಿ ಮಾತನಾಡಿ ಯಾವುದೇ ಒಂದು ದೇಶದ ಅಭಿವೃದ್ದಿ ಯಾಗಬೇಕಾದರೆ ಅಲ್ಲಿರುವಂತಹ ಹಳ್ಳಿಗಳ ಸುಧಾರಣೆಯಾದಾಗ ಮಾತ್ರ ಸಾಧ್ಯ. ದೈಹಿಕವಾಗಿ ಹಾಗೂ ಮಾನಸಿಕವಾಗಿ ವಿದ್ಯಾರ್ಥಿಗಳು ಸದೃಡವಾಗಲು ಎನ್.ಎಸ್.ಎಸ್ ಶಿಬಿರದ ಅವಶ್ಯಕತೆವಿದೆ. ಈಗಿನ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ಹಿಂದೆ ಬಿದ್ದಿರುವರು. ಆ ಸಮಾಜಿಕ ಜಾಲತಾಣಗಳಿಂದ ಹೊರಬಂದು ಈ ಹಳ್ಳಿಯ ವಾತಾರವಣದಲ್ಲಿ 7 ದಿನಗಳ ಎನ್.ಎಸ್.ಎಸ್ ಶಿಬಿರದಲ್ಲಿ ವಿದ್ಯಾರ್ಥಿಗಳು ಪಾಲ್ಗೋಳ್ಳುವದರಿಂದ ಗ್ರಾಮೀಣ ಮಟ್ಟದ ಜನರನ್ನು ಅರಿಯಲು ಸಾಧ್ಯವಾಗುತ್ತದೆ. ನಾಯಕತ್ವ ಗುಣ ಬೆಳೆಯುತ್ತದೆ ಎಂದರು.

ಯಾವುದೇ ವಿದ್ಯಾರ್ಥಿಯು ಸದೃಡ ಪ್ರಜೆಯಾಗಲು ಎನ್.ಎಸ್.ಎಸ್ ಶಿಬಿರದ ಅವಶ್ಯಕತೆ ಇದೆ ಎಂದು ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಶುಂಪಾಲ ಡಾ. ಡಿ.ಎಂ ಜವಳಕರ ಹೇಳಿದರು. ವಿದ್ಯಾರ್ಥಿಗಳ ಸರ್ವಾಂಗೀನ ಅಭಿವೃದ್ದಿಯಲ್ಲಿ ಎನ್.ಎಸ್.ಎಸ್. ಮಹತ್ವದ ಪಾತ್ರವನ್ನು ಬಿರುತ್ತದೆ. ಸಾಮಾಜಿಕ ಸೇವೆ, ದೇಶ ಸೇವೆ ಹಾಗೂ ಸಹಕಾರ ತಾಳ್ಮೇಯ ಮನೋಭಾವನೆಯನ್ನು ಬೆಳೆಸಿಕೊಳ್ಳಲು ಎನ್.ಎಸ್.ಎಸ್ ಶಿಬಿರ ಸಾಯಕವಾಗುತ್ತದೆ. ಎನ್.ಎಸ್.ಎಸ್ ಶಿಬಿರದ ಮುಖ್ಯ ಉದ್ದೇಶ ಗ್ರಾಮೀಣ ಮಟ್ಟದಲ್ಲಿರುವಂತಹ ಸಮಸ್ಯೆಗಳನ್ನು ಗ್ರಾಮಸ್ಥರಿಗೆ ಅರಿವು ಮೂಡಿಸುವದು ಎಂದು ಹೇಳಿದರ.

ತಾ.ಪಂ ಇ.ಓ ವಾಯ್.ಆರ್. ಯಕ್ಕುಂಡಿ ಮಾತನಾಡಿ ವಿದ್ಯಾರ್ಥಿಗಳು ಕನಸುಗಳನ್ನು ಕಾಣಿ, ಆ ಕನಸುಗಳು ನನಸು ಆಗಲು ನಿರಂತರ ಅಧ್ಯಯನ ಸತತ ಪ್ರಯತ್ನ ಅತ್ಯಅವಶ್ಯಕ. ಎಂದು ಹೇಳಿದರು. ಯಾವುದೇ ವ್ಯಕ್ತಿ ಸಾಧನೆಯನ್ನು ಕೈಗೊಳ್ಳಲು ಪದವಿಯ ಅವಶ್ಯಕತೆ ಇಲ್ಲ ಸಾಮಾನ್ಯ ವ್ಯಕ್ತಿಯು ಸಾಧನೆಯನ್ನು ಕೈಗೊಳ್ಳಬಹುದು ನಿರಂತರ ಪರಿಶ್ರಮದಿಂದ ನಿಮ್ಮ ಭವಿಷ್ಯದ ನಿರ್ಮಾಪಕರು ನಿವೇ ನಿಮ್ಮ ಭವಿಷ್ಯವನ್ನು ಬೇರ್ಯಾರು ನಿರ್ಮಾಣಗೊಳಿಸಲು ಸಾಧ್ಯವಿಲ್ಲ. ನಿಮಗೆ ಯಾವುದರ ಅಧ್ಯಯನದಲ್ಲಿ ಆಸಕ್ತಿ ಇದೆಯೋ ಅದನ್ನೆ ಮಾಡಿ ಪ್ರತಿಯೊಬ್ಬ ವ್ಯಕ್ತಿಯಲ್ಲಿ ತನ್ನದೆಯಾದ ವಿಶೇಷ ಶಕ್ತಿ ಅಡಗಿದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಪತ್ರಕರ್ತ ಜಗದೀಶ ಹೊಸಮನಿ ಮಾತನಾಡಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಆವರಣದಲ್ಲಿರುವಂತಹ ಅಂಗನವಾಡಿಯಿಂದ ಹಿಡಿದು ಪದವಿವರೆಗೆ ಇರುವ ಶಿಕ್ಷಣ ಸಂಸ್ಥೆಗಳಿಗೆ ಸ್ಥಳಾವಕಾಶ ಒದಗಿಸಲು ನಾವು ನಿರಂತರವಾಗಿ ಹೋರಾಟದಿಂದ ಈ ಶಿಕ್ಷಣ ಸಂಸ್ಥೆಗಳು ಸ್ಥಾಪನೆಯಾದವು. ವಿದ್ಯಾರ್ಥಿಗಳು ಸ್ವಾರ್ಥ ಮನೋಭಾವನೆಯನ್ನು ತ್ಯಾಜಿಸಿ ಉತ್ತಮ ನಡುವಳಿಕೆಯನ್ನು ಅಳವಡಿಸಕೊಳ್ಳಬೇಕೆಂದರು. ಕಾರ್ಯಕ್ರಮದಲ್ಲಿ ನಾಗುರ್ಡಾ ಗ್ರಾಮ ಪಂ ಪಿ.ಡಿ.ಓ ವೀಣಾ ಪಿ.ಎನ್. ಗೌಡಾ, ಜಯಮಂಗಳಾ ಜಾಲಿಹಾಳ, ಡಾ. ಭಾಗ್ಯಶ್ರೀ ಪಟ್ಟಣಶೇಟ್ಟಿ, ಸಾಗರ ಚಿಂಗಳೆ ಎಸ್.ಬಿ ಸಾಯೇನಕರ, ಮೀನಾಜಿ ಕರಾಡೆ, ರಾಮಚಂದ್ರ ಪಾಟೀಲ, ಮತ್ತಿತರು ಉಪಸ್ಥಿತರಿದ್ದರು. ಎನ್.ಎಸ್.ಎಸ್. ಶಿಬಿರಾಧಿಕಾರಿ ಡಾ. ಸಿ.ಬಿ ತಬೋಜಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಹಾಗೂ ಎಪ್.ಬಿ ನಾಯ್ಕರ ನಿರೂಪಿಸಿದರು. ಪ್ರೋ.ಎಸ್.ಎನ್ ಮೂಲಿಮನಿ ವಂದಿಸಿದರು.