SHARE

ವರದಿ:ಕಾಶೀಮ ಹಟ್ಟಿಹೊಳಿ, ಖಾನಾಪುರ

ಖಾನಾಪುರ: ಪಶ್ಚಿಮ ಬಂಗಾಳದಲ್ಲಿ ನಕ್ಸಲರು ನಡೆಸಿದ ದಾಳಿಗೆ ಖಾನಾಪೂರ ತಾಲೂಕಿನ ನಾವಗಾ ಗ್ರಾಮದ ನಿವಾಸಿ, ಯೋಧ ರಾಹುಲ್ ವಸಂತ ಶಿಂಧೆ (೨೫) ಹುತಾತ್ಮರಾಗಿದ್ದು. ಬಿಎಸ್ ಎಫ್ ೧೧೭ನೇ ಬೆಟಾಲಿಯನ್ ಯೋಧರು ರಾತ್ರಿ ಪಾಳಿ ಮುಗಿಸಿ ತಮ್ಮ ಟೆಂಟ್ ನತ್ತ ಹೊರಟಿದ್ದ ವೇಳೆ ನಕ್ಸಲರು ನಡೆಸಿದ ಗುಂಡಿನ ದಾಳಿಯಲ್ಲಿ ರಾಹುಲ್ ಸೇರಿದಂತೆ ಒಟ್ಟು ನಾಲ್ವರು ಯೋಧರು ಹುತಾತ್ಮರಾಗಿದ್ದರು. ಇದರ ಬಗ್ಗೆ ಬಿಎಸ್ಎಫ್ ಅಧಿಕಾರಿಗಳು ಭಾನುವಾರ ಮಧ್ಯಾಹ್ನ ರಾಹುಲ್ ತಂದೆ ವಸಂತ ಅವರಿಗೆ ಮಾಹಿತಿ ನೀಡಿದ್ದರು. ಮರಣೋತ್ತರ ಪರೀಕ್ಷೆ ಬಳಿಕ ಹುತಾತ್ಮ ರಾಹುಲ್ ಅವರ ಪಾರ್ಥಿವ ಶರೀರವನ್ನು ಪಶ್ಚಿಮ ಬಂಗಾಳದಿಂದ ವಿಶೇಷ ವಾಹನದಲ್ಲಿ ಕೋಲ್ಕತ್ತಾ ನಗರಕ್ಕೆ ರವಾನಿಸಲಾಗಿತ್ತು. ಅಲ್ಲಿಂದ ವಿಮಾನದ ಮೂಲಕ ಮಧ್ಯರಾತ್ರಿ ಗೋವಾ ವಿಮಾನ ನಿಲ್ದಾಣ ತಲುಪಿತ್ತು. ಅಲ್ಲಿಂದ ರಸ್ತೆ ಮಾರ್ಗವಾಗಿ ಇಂದು ಬೆಳಗ್ಗೆ ತಾಲೂಕಿಗೆ ತಲುಪಿತ್ತು. ರಾಹುಲ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ನಾವಗಾ ಗ್ರಾಮ ಸೇರಿದಂತೆ ತಾಲೂಕಿನಾದ್ಯಂತ ನೀರವ ಮೌನ ಆವರಿಸಿತು.ಇಬ್ಬರು ಸಹೋದರರು ದೇಶ ಸೇವಕರು: ಹೌದು ೨೦೧೨ ರಲ್ಲಿ ಗಡಿ ಭದ್ರತಾ ಪಡೆಯ ೧೧೭ನೇ ಯೂನಿಟ್ ನಲ್ಲಿ ಯೋಧನಾಗಿ ದೇಶ ಸೇವೆ ಪ್ರಾರಂಭಿಸಿದ್ದ ರಾಹುಲ್ ಶಿಂಧೆ ಪಂಜಾಬ್ ರಾಜ್ಯದ ವಿಶಾಲಪುರನಲ್ಲಿ ತರಬೇತಿ ಪಡೆದಿದ್ದರು. ಬಳಿಕ ಕಾಶ್ಮೀರ, ಪಂಜಾಬ್ ಮತ್ತು ಜಮ್ಮುವಿನಲ್ಲಿ ಸೇವೆ ಸಲ್ಲಿಸಿ ಕಳೆದ ಅಕ್ಟೋಬರ್ ನಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದನು. ತಾಲೂಕಿನಲ್ಲಿ ಪದವಿಯವಕರಿಗೆ ಶಿಕ್ಷಣ ಪೂರೈಸಿದ್ದ ರಾಹುಲ್ ತಂದೆ ವಸಂತ ಕೃಷಿಕರಾಗಿದ್ದು. ತಾಯಿ ಸುಜಾತಾ ಗೃಹಿಣಿ. ಇವರಿಗೆ ಒಬ್ಬ ಸಹೋದರ ಮತ್ತು ಒರ್ವ ಸಹೋದರಿ ಇದ್ದಾರೆ. ಸಹೋದರ ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ ಸೇವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೇ ರಾಹುಲ್ ತಂದೆ ವಸಂತ್ ಅವರ ಸಹೋದರರಾದ ಮುಧುಕರ, ರಾಮಕೃಷ್ಣ ಅವರೂ ಸಹ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಅವರ ಮಕ್ಕಳಾದ ರಾಮಚಂದ್ರ ಮತ್ತು ದಿನೇಶ್ ಅವರೂ ಯೋಧರಾಗಿದ್ದಾರೆ. ಒಟ್ಟಾಗಿ ಶಿಂಧೆ ಕುಟುಂಬದ ಹಲವು ಸದಸ್ಯರು ದೇಶಸೇವೆಯಲ್ಲಿರುವುದು ವಿಶೇಷ. ಖಾನಾಪುರ ತಾಲೂಕಾಡಳಿತ ವತಿಯಿಂದ ಯೋಧ ರಾಹುಲ ಶಿಂದೆ ಅಂತ್ಯಸಂಸ್ಕಾರಕ್ಕೆ ತಹಶಿಲ್ದಾರ ವಿದ್ಯಾದರ ಗುಳಗುಳಿ ನೇತೃತ್ವದಲ್ಲಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿತ್ತು.ಜಿಲ್ಲಾಡಳಿತ ವತಿಯಿಂದ ಬೆಳಗಾವಿ ಡಿಸಿ ಬೊಮ್ಮನಹಳ್ಳಿ, ಜಿಪಂ ಸಿಇಒ ಡಾ.ರಾಜೇಂದ್ರ ಕೆ.ವಿ, ಎಸ್ಪಿ ಸುಧಿರಕುಮಾರ ರೆಡ್ಡಿ, ಎಸಿ. ಕವಿತಾ ಯೊಗಪ್ಪನವರ, ತಾಲೂಕಾಡಳಿತ ವತಿಯಿಂದ ತಹಶಿಲ್ದಾರರ ವಿದ್ಯಾದರ ಗುಳಗುಳಿ, ತಾಪಂ ಎಇಒ ಲಕ್ಷ್ಮಣರಾವ ಯಕ್ಕುಂಡಿ, ಡಿ.ವಾಯ್.ಎಸ್.ಸಿ ಕರುಣಾಕರ ಶೆಟ್ಟಿ, ಸಿಪಿಐ ಮೋತಿಲಾಲ ಪವಾರ ಹಾಗೂ ರಾಜಕೀಯ ಗಣ್ಯರು ಗೌರವ ನಮನ ಸಲ್ಲಿಸಿದರು. .ಅಂತ್ಯಕ್ರಿಯೆ ಮಂಚಿತವಾಗಿ ಪೋಲಿಸ ಇಲಾಖೆಯಿಂದ ಗಾಳಿಯಲ್ಲಿ ‌ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದರು.