SHARE

ಬೆಳಗಾವಿ: ಜಿಲ್ಲೆಯ ಮಹತ್ವದ ರಾಜಕೀಯ ಬೆಳವಣಿಗೆ ಯೊಂದರಲ್ಲಿ ಶಾಸಕಿ ಅಂಜಲಿ ನಿಂಬಾಳ್ಕರ ಅವರ ಆಪ್ತ ಕಾರ್ಯಕರ್ತ ಸೂರ್ಯಕಾಂತ್ ಕುಲಕರ್ಣಿ ಕೈಗೆ ಗುಡ್ ಬೈ ಹೇಳಿ ಕಮಲ ಹಿಡಿಯುವುದರ ಮೂಲಕ ಕಾಂಗ್ರೆಸ್‌ ಗೆ ಬಿಗ್ ಶಾಕ್ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದ ಶಾಸಕಿ ಅಂಜಲಿ ನಿಂಬಾಳ್ಕರ್ ಅವರ ಆಪ್ತ ಕಾರ್ಯಕರ್ತ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಾದ ಸೂರ್ಯ ಕಾತ್ ಕುಲಕರ್ಣಿ ಕೇಂದ್ರದ ಮಂತ್ರಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಲೋಕಸಭೆಯ ಸಂಸದ ಅನಂತ್ ಕುಮಾರ್ ಹೆಗ್ಡೆ ಅವರ ಸಮ್ಮುಖದಲ್ಲಿ ಖಾನಾಪುರ ತಾಲ್ಲೂಕಿನ ದೇವಲತ್ತಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕೃತವಾಗಿ BJP ಪಕ್ಷಕ್ಕೆ ಸೇರ್ಪಡೆಯಾದರು. ಕಳೆದ ಹಲವು ವರ್ಷಗಳಿಂದ ಶಾಸಕಿ ಅಂಜಲಿ ನಿಂಬಾಳ್ಕರ್ ಅವರೊಂದಿಗೆ ಗುರುತಿಸಿಕೊಂಡ ಅವರು ಶಾಸಕಿಯಾಗಲು ಮರಾಠಾ ಭಾಷಿಕರ ಮತಗಳನ್ನು ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಇದೀಗ ಸೂರ್ಯಕಾಂತ ಕುಲಕರ್ಣಿ ಲೋಕಸಭೆ ಚುನಾವಣೆ ಮುಂಚೂಣಿಯಲ್ಲಿ ಪಕ್ಷ ತೊರೆದು ಬಿ.ಜೆ.ಪಿ.ಗೆ ಸೇರ್ಪಡೆಯಾಗಿರುವುದು ಶಾಸಕಿ ನಿಂಬಾಳ್ಕರ್ಗೆ ತೀವ್ರ ಮುಜುಗರ ಉಂಟು ಮಾಡಿದೆ.
ಇದೀಗ ಸೂರ್ಯಕಾಂತ ಕುಲಕರ್ಣಿ ಬಿಜೆಪಿ ಜೈ ಎಂದು ಈ ಲೋಕಸಭಾ ಚುನಾವಣೆಯಲ್ಲಿ ಅನಂತಕುಮಾರ ಹೆಗಡೆ ಬೆಂಬಲಿಗೆ ನಿಲ್ಲಲು ಸಿದ್ದವಾಗಿದ್ದಾರೆ. ಈ ಸಂದರ್ಭದ ಖಾನಾಪುರ ತಾಲ್ಲೂಕಿನ ಬಿಜೆಪಿ ಮುಖಂಡರುಗಳಾದ.ವಿಠ್ಠಲ ಹಲಗೇಕರ .ಪ್ರಮೋದ ಕೊಚೇರಿ. ಸಂಜಯ ಕುಬಲ. ಧನಶ್ರೀ ಸರರ್ದೇಸಾಯಿ. ಪ್ರಮೋದ ಕೊಚೇರಿ .ಮುಂತಾದವರು ಹಾಜರಿದ್ದರು .