SHARE

ಖಾನಾಪುರ: ಕಳೆದ 25 ವರ್ಷ ಈ ಕ್ಷೇತ್ರ ಪ್ರತಿನಿಧಿಸಿದ ಸಂಸದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಕ್ಷೇತ್ರಕ್ಕೆ ಮಾಡಿದ ಕೆಲಸ ಏನು ಎಂದು ತೋರಿಸಲಿ. ಜೋತೆಗೆ ಹಾಲಿ ಸಂಸದರು ನಿಂತ ನೀರಾಗಿದ್ದಾರೆ. ಆದ್ದರಿಂದ ನಿಂತ ನೀರು ಕಲುಷಿತವಾಗಿರುವುದರಿಂದ ಅದನ್ನು ತೆಗೆದು ಹಾಕಿ.. ಹೊಸದಾಗಿ ಹರಿಯುವ ನೀರನ್ನು ನಿಮ್ಮ ಕ್ಷೇತ್ರದಲ್ಲಿ ಆಯ್ಕೆ ಮಾಡಿರಿ ಎಂದು ಮಾಜಿ ಸಚಿವ ಕೆನರಾ ಉತ್ತರ ಕನ್ನಡ ಕ್ಷೇತ್ರದ ಲೋಕಸಭಾ ಜೆಡಿಸ್ ಸಂಭವ್ಯ ಅಭ್ಯರ್ಥಿ ಆನಂದ ಅಸ್ನೋಟಿಕರ ಅಭಿಪ್ರಾಯ ಪಟ್ಟರು.

ಅವರು ಮಂಗಳವಾರ ಪಟ್ಟಣದ ಶಿವಸ್ಮಾರದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರನ್ನೂದ್ದೆಶಿಸಿ ಸಭೆಯಲ್ಲಿ ಮಾತನಾಡಿದರು. ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವ ಇವರು ಕೌಶಲ್ಯ ಅಭಿವೃದ್ಧಿ ಸಚಿವರಾಗಿ ಯುವಕರಿಗೆ ಇವರ ಕೊಡುಗೆ ಏನು..? ಎಂದು ಮೊದಲು ಸ್ಪಷ್ಟ ಪಡಿಸಲಿ. ಆಯ್ಕೆಯಾಗಿ ಬಂದ ನಂತರ ಕ್ಷೇತ್ರವನ್ನೆ ಮರೆಯುವ ಇವರು ಚುನಾವಣೆಯಲ್ಲಿ ಯುವಕರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜೋತೆಗೆ “ಈ ಸಲ ಅನಂತಕುಮಾರ ಬೇಡ” ಎಂದು ಬಿಜೆಪಿ ಪಕ್ಷದ ಕಾರ್ಯಕರ್ತರೆ ಮಾತನಾಡುತ್ತಿದ್ದಾರೆಂದು ಆರೋಪಿಸಿದರು. ಧರ್ಮ ರಕ್ಷಣೆ ಹೇಗೆ ಮಾಡಬೇಕು ಎನ್ನುವದು ನಮಗೂ ಗೊತ್ತಿದೆ. ಆದರೆ ಜನರ ಭಾವನೆಗಳೊಂದಿಗೆ ಆಟ ಆಡಬೇಡಿ ಎಂದರು. ಡಾ.ಬಾಬಾಸಾಹೇಬ ಅಂಬೇಡ್ಕರ ಮತ್ತು ಬಸವಣ್ಣನವರ ಆದರ್ಶಗಳನ್ನು ನಾನು ಅಳವಡಿಸಿ ಕೊಂಡು ಬದುಕುತ್ತಿದ್ದು ಸಂಸದರಷ್ಟು ಮಾತಿನಲ್ಲಿ ಚಾಣಕ್ಷರಲ್ಲ ಎಂದು ಮಾತಿನಲ್ಲೇ ಛೇಡಿಸಿದರು. ಖಾನಾಪುರ ಕ್ಷೇತ್ರ ಅತ್ತ ಬೆಳಗಾವಿಗೂ ಇಲ್ಲ.. ಇತ್ತ ಉತ್ತರ ಕನ್ನಡಕ್ಕೂ ಸೇರದೆ ಮಧ್ಯದಲ್ಲಿ ಸಿಕ್ಕು ಅತಂತ್ರ ಸ್ಥಿತಿಯಲ್ಲಿದೆ.

ಈ ಕ್ಷೇತ್ರಕ್ಕೆ ನಾನು ಮೊದಲು ಬಾರಿ ಬಂದಿದ್ದು ಸಂಸದನಾಗಲು ಬಂದಿಲ್ಲ. ಬದಲಾಗಿ ಕೀಳು ಮಟ್ಟದ ರಾಜಕೀಯ ಮಾಡುತ್ತ ಧರ್ಮದ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುವ ಹಾಲಿ ಸಂಸದರನ್ನೂ ಹೊಗಲಾಡಿಸಿರಿ. ಕೆನರಾ ಕ್ಷೇತ್ರದಲ್ಲಿ ಸಂಸದರ ಹೆಸರು ಹಳ್ಳ ಹಿಡಿದಿದ್ದು ಕಿತ್ತೂರ ಮತ್ತು ಖಾನಾಪುರ ಭಾಗದ ಮತದಾರರು ಹೆಚ್ಚಿಗೆ ಮತ ನೀಡುತ್ತ ಬಂದಿದ್ದೀರಿ. ಈ ಬಾರಿ ಎಚ್ಚರಗೊಳ್ಳಬೇಕು ಎಂದರಲ್ಲದೆ ಜೆಡಿಎಸ್ ಮತ್ತು ಕಾಂಗ್ರೆಸ್ ಮಧ್ಯ ಯಾವುದೇ ಗೊಂದಲಗಳು ಇಲ್ಲ. ಸಚಿವ ಆರ್.ವಿ.ದೇಶಪಾಂಡೆ ಅವರ ನೇತೃತ್ವದಲ್ಲಿ ಲೋಕಸಭಾ ಚುನಾವಣೆ ಎದುರಿಸುತ್ತಿದ್ದು ಜೆಡಿಎಸ್ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದರು.

ಜೆಡಿಎಸ್ ಮುಖಂಡ ನಾಸೀರ ಬಾಗವಾನ ಮಾತನಾಡಿ ಹಾಲಿ ಸಂಸದರು ಆದ ಅನಂತಕುಮಾರ ಮುಸ್ಲಿಂ ಸಮುದಾಯವನ್ನು ದ್ವೇಷಿಸಿ, ಹಿಂದೂ ಸಮಾಜದ ಜನತೆಗೆ ತಮ್ಮ ಸ್ವಾರ್ಥಕ್ಕಾಗಿ ಉಪಯೋಸಿಕೊಳ್ಳುತ್ತಾರೆ. ಆದರೆ ಭಾರತ ದೇಶದಲ್ಲಿರುವ ಮುಸ್ಲಿಂರೆಲ್ಲರೂ ಈ ದೇಶದವರೇ ಆಗಿದ್ದಾರೆ. ಆದರೆ ಬ್ರಾಹ್ಮಣ ಸಮುದಾಯದವರಾದ ನೀವು ಅಪಘಾನಿಸ್ತಾನ ಮೂಲದವರು ಎಂದು ಟೀಕಿಸಿದರು. ಮೋದಿಯ 56ಇಂಚು ಎದೆ ಇದೆ ಅಂತಾ ಹೇಳುತ್ತಿದ್ದರಿ, ಆದರೆ ನಮ್ಮ ಅಭ್ಯರ್ಥಿ ಆನಂದ ಅಸ್ನೊಟಿಕರದೂ 66ಇಂಚು ಎದೆ ಇದೆ. ಏಕ ಮರಾಠಾ-ಲಾಖ ಮರಾಠಾ ಎನ್ನುತ್ತಾ ಈ ಬಾರಿ ನಮ್ಮ ತಾಲೂಕಿನ ಮರಾಠಿಗರು ಹಾಲಿ ಸಂಸದರ ವಿರುದ್ಧ ಮತ ಚಲಾಯಿಸುವುದರ ಮೂಲಕ ತೀರುಗೆಟು ನೀಡಲಿದ್ದಾರೆ. ಜೆಡಿಎಸ್ ಈ ಬಾರಿ ಗೆಲ್ಲಿಸುವದರ ಮೂಲಕ ಕ್ಷೇತ್ರದ ಚಿತ್ರಣ ಬದಲಿಸಬೇಕೆಂದರು.

ಈ ಸಂಧರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ರೀಯಾಜ ಪಟೇಲ್, ಫೇಜುಲ್ಲಾ ಮಾಡಿವಾಲೆ ನ್ಯಾಯವಾದಿ ಸಿ.ಬಿ.ಅಂಬೋಜಿ, ಮಹಾಂತೇಶ ಸಂಬರಗಿ, ನ್ಯಾಯವಾದಿ ಎಚ್.ಎನ್.ದೇಸಾಯಿ, ಪಪಂ ಸದಸ್ಯೆ ಮೇಘಾ ಕುಂದರಗಿ, ಲಕ್ಷ್ಮಣ ಮಾದರ ಮಾತನಾಡಿದರು. ಸಭೆಯಲ್ಲಿ ಜೆಡಿಎಸ್ ಮುಖಂಡರಾದ ಪಾಂಡುರಂಗ ಮಿಟಗಾರ, ಮುನಾಫ ಸನದಿ, ರಫೀಕ ವಾರಿಮನಿ, ಬಸ್ಸನ್ನಾ ತುರಮುರಿ ಹಾಗೂ ಕಾರ್ಯಕರ್ತರು ಭಾಗವಹಿಸಿದದ್ದರು.