SHARE

ಬೆಳಗಾವಿ :ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಯಾವುದೇ  ಆಶೆ ಆಮಿಶಕ್ಕೆ ಒಳಗಾಗದೆ ಉತ್ತಮ ನಾಯಕನಿಗೆ ಮತ ಚಲಾಯಿಸಿ ಎಂದು ಬೆಳಗಾವಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಾನಂದ ಮಗದುಮ್ ಹೇಳಿದರು.
ಇಂದು ಬೆಳಗಾವಿ ನಗರದ ಸಂಗೊಳ್ಳಿ ರಾಯಣ್ಣಾ ವೃತ್ತದಲ್ಲಿ ಅಟೋ ಚಾಲಕರು ಹಮ್ಮಿಕೊಂಡ ಮತಧಾನ ಜಾಗೃತಿ ಜಾತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ದೇಶದ ಬದ್ದತೆಗೆ ಪ್ರತಿಯೊಬ್ಬರ ಮತ ಅವಶ್ಯಕ ಅದ್ದರಿಂದ ಕಡ್ಡಾಯವಾಗಿ ಮತಚಲಾಯಿಸಿ. ಇಂದು ಅಟೋ ಚಾಲಕರು ಮಾತದಾನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮೂಲಕ ವಿವಿ ಪ್ಯಾಟ್ ವಿದ್ಯುನ್ಮಾನ ಯಂತ್ರದ ಬಗ್ಗೆ ಮತ್ತು ಮತಧಾನ ಚಲಾವಣೆಯ ಪ್ರಕ್ರಿಯ ಕುರಿತು ಜಾಗೃತಿ ಮೂಡಿಸುತ್ತಿದ್ದು ಸಾರಿಗೆ ಇಲಾಖೆಯು ಇದಕ್ಕೆ ಬೆಂಬಲ ನೀಡಿದೆ ಎಂದರು .
ಬಳಿಕೆ ಮತದಾನ ಜಾಗೃತಿ ಜಾಥಾವನ್ನು ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆರಂಭಿಸಿ ಚನ್ನಮ್ಮ ವೃತ್ತದವರೆಗೆ ಜಾತಾ ಮಾಡಿ ಮರಳಿ ಸಂಗೊಳ್ಳಿ ರಾಯಣ್ಣ ವತ್ತಕ್ಕೆ ಮುಕ್ತಾಯಗೊಳಿಸಲಾಯಿತು ಈ ಸಂದರ್ಭದಲ್ಲಿ ಬೆಳಗಾವಿ ಅಫರ ಸಾರಿಗೆ ಆಯುಕ್ತ ಮಾರುತಿ ಸಾಂಭ್ರಾಣಿ, ಬೆಳಗಾವಿ ಜಂಟಿ ಸಾರಿಗೆ ಆಯುಕ್ತರು ಬಿ.ಪಿ ಉಮಾಶಂಕರ ಸೇರಿದಂತೆ ಬೆಳಗಾವಿ ಸಾರಿಗೆ ವಿಭಾಗದ ಎಲ್ಲ ಅಧಿಕಾರಿಗಳು ಹಾಜರಿದ್ದರು.