SHARE

ಬೆಳಗಾವಿ: ಲೋಂಡಾ-ಕ್ಯಾಸಲ್ ರಾಕ್-ಗೋವಾ ಮಾರ್ಗದಲ್ಲಿ ಗವ್ವೇವಾಳಿ ಸಮೀಪ ಚಲಿಸುವ ರೈಲು ಡಿಕ್ಕಿ ಹೊಡೆದ ಪರಿಣಾಮ ಕಾಡುಕೋಣ ವೊಂದು ಮೃತ ಪಟ್ಟ ಘಟನೆ ನಡೆದಿದೆ.
ರೈಲು ಪ್ರಯಾಣಿಕರು ಹಳಿಯ ಅಕ್ಕ ಪಕ್ಕ ಚೆಲ್ಲುವ ಆಹಾರ ಪದಾರ್ಥಗಳ ವಾಸನೆ ಆಕರ್ಷಿತಗೊಂಡು ಹಳಿಗಳ ಮೇಲೆ ಸಂಚರಿಸುತ್ತಿದ್ದ ಕಾಡುಕೋಣಕ್ಕೆ ರೈಲು ಬಡಿದು ಕಾಡುಕೋಣ ರೈಲಿನ ಗಾಲಿಗಳಿಗೆ ಸಿಲುಕಿದ್ದು,ರುಂಡ ಬೇರ್ಪಟ್ಟು ಸಾವನ್ನಪ್ಪಿದೆ. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಪಂಚನಾಮೆ ಜರುಗಿಸಿ ಅಂತ್ಯಕ್ರಿಯೆ ನಡೆಸಿದರು.
ರೈಲು ಹಳಿಗಳ ಪಕ್ಕದಲ್ಲಿ ಪ್ರಯಾಣಿಕರು ತಿಂದು ಎಸೆದ ಆಹಾರವು ಕಾಡು ಪ್ರಾಣಿಗಳ ಪ್ರಾಣಕ್ಕೆ ಕಂಟಕ ವಾಗುತ್ತಿದ್ದು ಈ ಹಿಂದೆಯೂ ಅನೇಕ ವನ್ಯಜೀವಿಗಳು‌ ಈ ಕಾರಣದಿಂದ ಪ್ರಾಣ ಕಳೆದುಕೊಂಡಿವೆ ಎಂದು ಅರಣ್ಯ ಅಧಿಕಾರು ಕಳವಳ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ರೈಲಿನಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರು ಆಹಾರವನ್ನು ಹೊರಗೆ ಚೆಲ್ಲದೇ ಕಸದ ಡಬ್ಬಿಗಳಿಗೆ ಹಾಕಬೇಕೆಂದು ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.