SHARE

ಬೆಳಗಾವಿ: ಕೆಎಲ್ ಇ ಆಯುರ್ವೇದ ಆಸ್ಪತ್ರೆ ಹಾಗೂ ರಸಾಯು ಕ್ಯಾನ್ಸರ್ ಕ್ಲಿನಿಕ್ ಸಹಯೋಗದಲ್ಲಿ ಉಚಿತ ಕ್ಯಾನ್ಸರ್ ತಪಾಸಣೆ ಶಿಬಿರ ಮಾರ್ಚ್ 30ಕ್ಕೆ ನಡೆಯಲಿದೆ. ಇಂದು ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ವೈದ್ಯಕೀಯ ಅಧೀಕ್ಷಕ ಡಾ. ಎಸ್. ಕೆ. ಪಾಟೀಲ ಕ್ಯಾನ್ಸರ್ ರೋಗ ನಿವಾರಣೆಗೆ ಆಯುರ್ವೇದದ ಮೂಲಕ ಪರಿಹಾರ ಕಂಡುಕೊಳ್ಳಲು ಅವಕಾಶಗಳು ಇವೆ ಎಂದರು. ರಸಾಯು ಕ್ಲಿನಿಕ್ ಸಂಸ್ಥಾಪಕ ಡಾ. ಯೊಗೇಶ ಬೆಂಡಾಲೆ ಅಂತಾರಾಷ್ಟ್ರೀಯ ಕ್ಯಾನ್ಸರ್ ತಜ್ಞರಾಗಿದ್ದು, ಸುಮಾರು 3000ರೋಗಿಗಳಿಗೆ ಯಶಸ್ವಿ ಚಿಕಿತ್ಸೆ ನೀಡಿದ್ದು, ಅವರೇ ಖುದ್ದು ರೋಗಿಗಳ ತಪಾಸಣೆ ನಡೆಸುವರು.
ವಿವಿಧ ಬಗೆಯ ಕ್ಯಾನ್ಸರನೊಂದಿಗೆ ಹೋರಾಟ ಮಾಡಲು ಆಯುರ್ವೇದಿಕ ಔಷಧಿಗಳ ಮಹತ್ವ ತಿಳಿಸಿಕೊಡಲಾಗುವುದು. ದುಷ್ಪರಿಣಾಮ ರಹಿತ ಆಯುರ್ವೇದಿಕ ಔಷಧಿ ಮತ್ತು ಚಿಕಿತ್ಸೆಯ ಲಾಭ ಪಡೆಯಲು ಜನತೆ ಉಚಿತ ಶಿಬಿರದ ಉಪಯೋಗ ಪಡೆಯಬೇಕು ಎಂದರು. ಮಾರ್ಚ್ 30ರ ಶನಿವಾರ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಉಚಿತ ಶಿಬಿರ ನಡೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಡಾ. ಸಂತೋಷ ಪಾಟೀಲ, ಡಾ. ಆನಂದ ಪಾಟೀಲ ಇತರರು ಉಪಸ್ಥಿತರಿದ್ದರು.