SHARE

ಬೆಳಗಾವಿ: ಇಂದು ನಗರದ ಚೆನ್ನಮ್ಮ ವೃತ್ತದಲ್ಲಿ ವಿಶಿಷ್ಟ ಪ್ರತಿಭಟನೆ ಜರುಗಿತು. ಜೈಲಿನಲ್ಲಿರುವ ವಿಚಾರಾಧೀನ ಮತ್ತು ಶಿಕ್ಷೆಗೆ ಒಳಗಾಗಿರುವ ಕೈದಿಗಳಿಗೂ ಮತದಾನ ಮಾಡಲು ಅವಕಾಶ ಕೊಡಬೇಕೆಂದು ಮಾಜಿ ಕೈದಿ ಹಾಗೂ ಸಮಾಜ ಸೇವಕ
ಬೈಲಹೊಂಗಲ ಮೂಲದ ವ್ಹಿಜಿ ಬಾಳೆಕುಂದ್ರಿ ಪ್ರತಿಭಟನೆ ನಡೆಸಿದರು. ದೇಶ ವಿದೇಶದಲ್ಲಿರುವ ಕೈದಿಗಳಿಗೂ ಮತದಾನ ಮಾಡಲು ಅವಕಾಶ ಕೊಡಿ ಎಂಬ ಫಲಕ‌ ಬರೆದು ಆಗ್ರಹಿಸಿದರು. ಜೈಲಿನಲ್ಲಿರುವ ಕೈದಿಗಳಿಗೂ ಮತದಾನದ ಹಕ್ಕಿದೆ ಅವರು ಮತದಾನದಿಂದ ವಂಚಿತರಾಗಬಾರದು ಅವರಿಗೆ ಪೋಸ್ಟ ಮೂಲಕ ಮತದಾನ ಮಾಡಲು ಅವಕಾಶ ನೀಡಬೇಕು ಎಂದು ಚುನಾವಣಾ ಆಯೋಗ ಕ್ಕೆ ಆಗ್ರಹಿಸಿದರು.