SHARE

ಚಿತ್ರದುರ್ಗ: ಮೈತ್ರಿ ಸರ್ಕಾರ ರೈತರ ಸಾಲ ಮನ್ನಾ ಮಾಡೋದಾಗಿ ಹೇಳಿತ್ತು. ಆದರೆ ಸಾಲ ಮನ್ನಾ ಮಾಡಲು ರಾಜ್ಯ ಸರ್ಕಾರ ವಿಫಲವಾಗಿದ್ದು, ರೈತರ ಖಾತೆಗೆ ದುಡ್ಡು ಬದಲು ವಾರೆಂಟ್ ಬರುತ್ತಿದೆ ಎಂದು ರಾಜ್ಯ ಮೈತ್ರಿ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಪ್ರದಾನಿ ನರೇಂದ್ರ ಮೋದಿ ಚಿತ್ರದುರ್ಗದಲ್ಲಿ ನಡೆದ ಪ್ರಚಾರ ಸಮಾವೇಶದಲ್ಲಿ ಮಾತನಾಡಿದರು. ಪಾಕಿಸ್ತಾನದ ಮೇಲೆ ದಾಳಿ ನಡೆಸಿದ್ದರಿಂದ. ಭಾರತದಲ್ಲಿ ಕೆಲವರಿಗೆ ನೋವಾಗಿದೆ. ಇಲ್ಲಿನ ಸಿಎಂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ. ಭದ್ರತಾ ಪಡೆಗಳ ಶಕ್ತಿಯನ್ನು ಪ್ರಸ್ತಾಪಿಸಬಾರದು‌ ಎಂದಿದ್ದರು.

ಆತಂಕವಾದಿಗಳನ್ನು ಶಿಕ್ಷಿಸಿದ್ರೆ ಇವರಿಗೇನು ಸಮಸ್ಯೆ? ಆತಂಕವಾದಿಗಳ ವೋಟು ಇಲ್ಲಿದೆಯೋ? ಅಥವಾ ಪಾಕಿಸ್ತಾನದಲ್ಲಿದೆಯೋ? ಎಂದು ಸಿಎಂ ಹೆಚ್​. ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು. ಜೆಡಿಎಸ್​ ಮತ್ತು ಕಾಂಗ್ರೆಸ್​ ನಿಯತ್ತಿಲ್ಲ. ಇವರಿಗೆ ನಿಯತ್ತಿದ್ದರೆ ದಾವಣಗೆರೆ ನಗರವನ್ನು ಮ್ಯಾಂಚೆಸ್ಟರ್​​ ಮಾಡುವ, ಸ್ಮಾರ್ಟ್​​ ಸಿಟಿ ಮಾಡಬಹುದಿತ್ತು. ನಾವು ದಾವಣಗೆರೆಯನ್ನು ಸ್ಮಾರ್ಟ್ ಸಿಟಿ ಮಾಡಲು ಯೋಜನೆ ರೂಪಿಸಿದ್ದು, ಯುವಕರಿಗೆ ಉದ್ಯೋಗ ನೀಡಲು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.