SHARE

ಖಾನಾಪುರ: ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಖಾನಾಪುರ ಭಾಗದಲ್ಲಿ ಒಂದು ಜನ ಸಂಪರ್ಕ ಸಭೆಯನ್ನು ಮಾಡದೇ, ಸಂಸದರ ನಿಧಿಗೆ ಬಂದ ಅನುದಾನ ಬಳಕೆ ಮಾಡದೇ ವಾಪಸ್ಸು ಹೋಗಿದೆ. ಜನರ ಕಷ್ಟ ಸುಖವನ್ನು ನೋಡದ ಇಂಥ ವ್ಯಕ್ತಿಗೆ ನೀವು ಮತ ಹಾಕುತ್ತೀರಾ? ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಸಂಧರ್ಭದಲ್ಲಿ ಖಾನಾಪುರ ಶಾಸಕಿ ಡಾ.ಅಂಜಲಿ‌‌ ನಿಂಬಾಳ್ಕರ ಹೇಳಿದರು.ಅವರು ಬೆಳಗಾವಿ ಜಿಲ್ಲೆಯ ಖಾನಾಪುರ ಭಾಗದ ಲಕ್ಕೆಬೈಲ್, ಕಾಮಸಿನಕೊಪ್ಪ, ದೇವಲತ್ತಿ, ಹಿರೆಹಟ್ಟಿಹೊಳಿ, ಹೀರೆಮುನವಳ್ಳಿ, ಪಾರಿಶ್ವಾಡ, ಇಟಗಿ ಹಾಗೂ ಪಾರಿಶ್ವಾಡ ಜಿಪಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಲೋಕಸಭಾ ಚುನಾವಣೆಯ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ಅನಂತಕುಮಾರ್ ಖಾನಾಪುರ ಭಾಗಕ್ಕೆ ಏನಾದರೂ ಇಲ್ಲಿ ಅಭಿವೃದ್ಧಿ ಯೋಜನೆ ಕೊಟ್ಟಿದ್ದಾರಾ ಅಥವಾ ಲೋಕಸಭೆಯ ಸದನದಲ್ಲಿ ಈ ಭಾಗದ ಸಮಸ್ಯೆ ಕುರಿತು ಏನಾದರೂ ಚರ್ಚೆ ಮಾಡಿದ್ದಾರಾ? ಅವರು ಲೋಕಸಭೆಯಲ್ಲಿ ಮಾತನಾಡಿದ್ದು ಒಂದು ಬಾರಿ ಮಾತ್ರ. ಅದು ಸಂವಿಧಾನ ಬದಲಿಸುತ್ತೇವೆ ಎಂದು ಹೇಳಿದಾಗ ಈ ಹೇಳಿಕೆಯಿಂದ ಬಿಜೆಪಿ ಪಕ್ಷಕ್ಕೆ ಭಾರಿ ಮುಜುಗರ ಆಗಿತ್ತು. ಆಗ ಕ್ಷಮೆ ಕೇಳಲು ಲೋಕಸಭೆಯಲ್ಲಿ ಕಾಣಿಸಿಕೊಂಡಿದ್ದು ಅಷ್ಟೆ ಎಂದು ಹೇಳಿದರು.ಈ ಭಾಗದಲ್ಲಿ ಮಹದಾಯಿ ಹೋರಾಟ ನಡೆದಾಗ ನಿಮ್ಮ ಪರ ದ್ವನಿ ಯಾಗಿದ್ದನಾ? ಶಿವಾಜಿ ಮಹಾರಾಜರ ಬಗ್ಗೆ ಹಗುರವಾಗಿ ಮಾತನಾಡುವ, ಜೈನ ಧರ್ಮದ ಗುರುಗಳ ಬಗ್ಗೆ ಹಗುರವಾಗಿ ಹೇಳಿಕೆ ನೀಡುವ ವ್ಯಕ್ತಿಗೆ ಮತ ಹಾಕುತ್ತೀರಾ? ಎಂದು ಜನರನ್ನು ಪ್ರಶ್ನಿಸಿದರು. ನಮ್ಮ ಖಾನಾಪುರ ಭಾಗದ ಜನರ ಮುಖ ಅನಂತಕುಮಾರ ನೊಡಿಲ್ಲ. ಇಲ್ಲಿಯ ಜನರ ಸಮಸ್ಯೆಯನ್ನು ಆಲಿಸಲ್ಲಿಲ್ಲ. ನಾವು ಕೆಲಸ ಮಾಡುವ ಅಭಿವೃದ್ಧಿ ಮಾಡುವ ಜನರಿಗೆ ಮತ ಹಾಕಬೇಕು. ಅದನ್ನು ಬಿಟ್ಟು ಮೋದಿ ನೋಡಿ ಅನಂತಕುಮಾರನಿಗೆ ಮತ ಹಾಕಬೇಡಿ ಎಂದು ಜನರಿಗೆ ಕಿವಿಮಾತು ಹೇಳಿದರು.

ಈ ಸಂಧರ್ಭದಲ್ಲಿ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಆನಂದ ಅಸ್ನೊಟಿಕರ, ಜೆಡಿಎಸ್ ಮುಖಂಡ ನಾಸಿರ್ ಬಾಗವಾನ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಅಂಗಡಿ, ಖಾನಾಪುರ ತಾಲೂಕ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಮಧು ಕವಲೇಕರ್ ಕಾಂಗ್ರೆಸ್ ಮುಖಂಡ ಜಾಕಿ ಪರ್ನಾಂಡಿಸ್ ಗೌಸ್ ಲಾಲ್ ಪಟೇಲ್, ಕಾಂಗ್ರೆಸ್ ಹಾಗೂ ಜೇಡಿಎಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ: ಕಾಶೀಮ ಹಟ್ಟಿಹೊಳಿ