SHARE

ಬೆಳಗಾವಿ: ಚುನಾವಣೆ ಸಂದರ್ಭ ಕೇಂದ್ರ ಸರಕಾರ ಆದಾಯ ತೆರಿಗೆ ಇಲಾಖೆಯ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಆರೋಪಿಸಿದ್ದಾರೆ. ಮಾಧ್ಯಮಗಳಿಗೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿ ಕಾಂಗ್ರೆಸ್ ಅಭ್ಯರ್ಥಿಗಳ ಧೈರ್ಯ ಸ್ಥೈರ್ಯ ಕುಂದಿಸಲು ಅಭ್ಯರ್ಥಿಗಳ ಬೆಂಬಲಿಗರ ಮನೆಗಳ ಮೇಲೆ ದಾಳಿ ಮಾಡಿಸಲಾಗುತ್ತಿದೆ. ಚುನಾವಣೆ ಆಯೋಗಕ್ಕೆ ದೂರಿದರು ಯಾವುದೇ ಪ್ರಯೋಜನವಾಗುತ್ತಿಲ್ಲ. ಪ್ರಾಮಾಣಿಕ ಚುನಾವಣೆ ನಡೆಯುವುದೇ ಅನುಮಾನ ಎಂದರು. ಶಾಸಕ ರಮೇಶ ಜಾರಕಿಹೊಳಿ ತಮ್ಮ ಸಂಪರ್ಕದಲ್ಲಿಲ್ಲ, ಆದರೆ ಅವರು ಕಾಂಗ್ರೆಸನೊಂದಿಗೆ ಇದ್ದಾರೆ ಎಂದರು. ಲಕ್ಷ್ಮೀ ಹೆಬ್ಬಾಳಕರ, ವಿನಯ ನಾವಲಗಟ್ಟಿ ಮತ್ತಿತರರು ಉಪಸ್ಥಿತರಿದ್ದರು.