SHARE

ಬೆಳಗಾವಿ: ಸಾಧುನವರ ಅಭಿಮಾನಿ ಬಳಗ ಮತ್ತು ಸಾಧುನವರ ಯೂಥ್ ಪೌಂಡೇಶನ್ ಹೆಸರಲ್ಲಿ ಪ್ರತಿಸ್ಪರ್ಧಿ ಸುರೇಶ ಅಂಗಡಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ವಿರೊಧಿಸಿ ವಿ. ಎಸ್. ಸಾಧುನವರ ವಿರುದ್ದ ಸುರೇಶ ಅಂಗಡಿ ದೂರು ನೀಡಿದ್ದಾರೆ. ಪ್ರಕರಣದ ದೂರು ಸ್ವೀಕರಿಸಿರುವ ಜಿಲ್ಲಾಧಿಕಾರಿ ಡಾ ವಿಶಾಲ. ಆರ್. ಕಾಂಗ್ರೆಸ್ ಅಭ್ಯರ್ಥಿ ವಿ. ಎಸ್. ಸಾಧುನವರ ಅವರಿಗೆ ನೊಟೀಸ್ ಜಾರಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಂಸದ ಸುರೇಶ ಅಂಗಡಿ ಅವರಿಗೆ ಅವಮಾನ ಆಗುವ ರೀತಿಯಲ್ಲಿ ಸುದ್ದಿ ಹರಡಿಸಲಾಗಿದೆ ಎಂಬ ಮಾಹಿತಿ ಅನ್ವಯ ಜಿಲ್ಲಾ ಚುನಾವಣಾಧಿಕಾರಿ ನೋಟೀಸ್ ಹೊರಡಿಸಿದ್ದಾರೆ.