SHARE

ಬೆಳಗಾವಿ: ಸನ್ಮಾನ್ಯ ರಮೇಶಣ್ಣ ಜಾರಕಿಹೊಳಿ ಎಂಬ ನಾಲುಗೆ ತಪ್ಪಿದಂತೆ ನಟಿಸುವ ಉವಾಚ ಹೊರಬಿದ್ದಿದ್ದು ಸಂಸದ ಸುರೇಶ ಅಂಗಡಿ ಬಾಯಲ್ಲಿ. ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಪ್ರಚಾರ ಸಭೆಯಲ್ಲಿ ಪ್ರಧಾನಿ ಮೋದಿ ಆಗಮನಕ್ಕಿಂತ ಮುಂಚೆಯೇ ಮಾತನಾಡಿದ ಸಂಸದ ಸುರೇಶ ಅಂಗಡಿ, ಮಾಜಿ ಸಂಸದ ರಮೇಶ ಕತ್ತಿ ಅವರನ್ನು ರಮೇಶಣ್ಣ ಜಾರಕಿಹೊಳಿ ಎಂದು ಸಂಬೋಧಿಸಿ ಸಾರ್ವಜನಿಕ ನಗೆ ಉಕ್ಕಿಸಿದರು. ಮಾಜಿ ಸಿಎಂ ಜಗದೀಶ ಶೆಟ್ಟರ್ ಸೇರಿ ಬಿಜೆಪಿ ನಾಯಕರು ಇದ್ದರು. ಕಾಂಗ್ರೆಸ್ ಶಾಸಕ ರಮೇಶ ಜಾರಕಿಹೊಳಿ ಎಪ್ರಿಲ್ 26ಕ್ಕೆ ಬಿಜೆಪಿಗೆ ಆಗಮಿಸುವ ಮುನ್ಸೂಚನೆ ಎಂದು ಚರ್ಚೆ ವ್ಯಕ್ತವಾಯಿತು.

ತಪ್ಪು ಅರ್ಥ ಬೇಡ: ಸಹೋದರ ಉಮೇಶ ಕತ್ತಿ ಶ್ರೀಶೈಲ ದೇವಸ್ಥಾನಕ್ಕರ ತೆರಳಿದ್ದು ಅವರು ಸಭೆಗೆ ಬರೊಲ್ಲ. ಜನ ತಪ್ಪಾಗಿ ಭಾವಿಸಬಾರದು ಎಂದು ರಮೇಶ ಕತ್ತಿ ಸಭೆಗೆ ಮನವಿ ಮಾಡಿದರು.