SHARE

ಖಾನಾಪುರ: ರಾಜ್ಯದಲ್ಲಿ ಇರುವಂಥ ಮರಾಠಿ ಸಮುದಾಯಕ್ಕೆ ಪ್ರವರ್ಗ 2ಎ ಸೇರಿಸುವಂತೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ಮುಖ್ಯಮಂತ್ರಿಗೆ ಮನವಿ ಮಾಡಿದರು. ಅವರು ಉತ್ತರ ಲೋಕಸಭಾ ಕ್ಷೇತ್ರದ ಭಾಗವಾದ ಖಾನಾಪುರದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಪಕ್ಷದ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಮಾತನಾಡಿದರು.ನಿಮ್ಮ ಭಾಗದಲ್ಲಿ ಮಹದಾಯಿ ಹೋರಾಟ ನಡೆದಾಗ ನಿಮ್ಮ ಪರ ಅನಂತಕುಮಾರ ಹೆಗಡೆ ದ್ವನಿಯಾಗಿದ್ದನಾ? ಈ ಬಗ್ಗೆ ಲೋಕಸಭೆಯ ಸದನದಲ್ಲಿ ಮಹದಾಯಿ ಹೋರಾಟದ 25 ವರ್ಷ ದಲ್ಲಿ ಒಂದು ಸಾರಿಯಾದರೂ ಮಾತನಾಡಿದ್ದಾನಾ? ಮಾತೆತ್ತಿದರೆ ನಾನು ಹಿಂದೂಗಳ ರಕ್ಷಣೆ ಮಾಡುತ್ತೇನೆ ಎನ್ನುವವನು ಪೈಯಾಜ್ ಜೊತೆ ವೇದಿಕೆ ಹಂಚಿಕೊಂಡು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾನೆ. ಧರ್ಮ ರಕ್ಷಣೆ ಮಾಡಲು ಬಂದಿದ್ದೇನೆ ಅಭಿವೃದ್ಧಿ ಮಾಡಲು ಬಂದಿಲ್ಲ ಎನ್ನುತ್ತಾನೆ. ಧರ್ಮದ ರಕ್ಷಣೆ ಮಾಡುವುದಾದರೆ ಮಠ ಮಂದಿರ ಕಟ್ಟಿಕೊಂಡು ಇರಲಿ. ಯಾಕೆ ಸುಮ್ಮನೆ ಜಿಲ್ಲೆಯ ಸಂಸದನಾಗಿ ಇರಬೇಕಿತ್ತು ಎಂದು ಪ್ರಶ್ನಿಸಿದರು.ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿ, ಬಿಜೆಪಿಯವರು ದೇಶದ ರಕ್ಷಣೆ ಬಗ್ಗೆ ಮಾತನಾಡುತ್ತಾರೆ. ಅವರಿಗೆ ಚುನಾವಣೆ ಸಂದರ್ಭದಲ್ಲಿ ಮಾಡಿರುವಂತ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡಲು ವಿಷಯವಿಲ್ಲ. ಬಿಜೆಪಿ ನಾಯಕರು ದೇಶಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ? ಮಹಿಳೆಯರಿಗೆ ಏನು ಕೊಡುಗೆ ನೀಡಿದ್ದಾರೆ. ಮೋದಿ, ರೈತರ ಬಗ್ಗೆ ಕಾಳಜಿ ಇಲ್ಲದ ಪ್ರಧಾನಮಂತ್ರಿ ಎಂದು ವಾಗ್ದಾಳಿ ನಡೆಸಿದರು.

ಶಾಸಕಿ ಅಂಜಲಿ ನಿಂಬಾಳಕರ್ ಮಾತನಾಡಿ, ನಮ್ಮ ಖಾನಾಪುರ ಭಾಗದ ಜನರ ಮುಖ ಅನಂತಕುಮಾರ್ ನೊಡಿಲ್ಲ. ಇಲ್ಲಿಯ ಜನರ ಸಮಸ್ಯೆಯನ್ನು ಆಲಿಸಲ್ಲಿಲ್ಲ. ನಾವು ಕೆಲಸ ಮಾಡುವ, ಅಭಿವೃದ್ಧಿ ಮಾಡುವ ಜನರಿಗೆ ಮತ ಹಾಕಬೇಕು. ಸಚಿವ ಆರ್.ವಿ.ದೇಶಪಾಂಡೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ನಮ್ಮ ಭಾಗದ ರಸ್ತೆಗಳಿಗೆ ಅನುದಾನವನ್ನು ನೀಡಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಮಿ, ಖಾನಾಪುರ ಕ್ಷೇತ್ರದ ಅಭಿವೃದ್ಧಿಗೆ ಅನುದಾನವನ್ನು ಬಿಡುಗಡೆ ಮಾಡಿ ಈ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಂದಾಯ ಸಚಿವರಾದ ಆರ್.ವಿ. ದೇಶಪಾಂಡೆ, ಖಾನಾಪುರದ ಜೆಡಿಎಸ್ ಮುಖಂಡ ನಾಸಿರ ಬಾಗವಾನ್, ಬಾಬಾ ಸಾಹೇಬ್ ಪಾಟೀಲ್, ರೈತ ಸಂಘದ ರಾಜ್ಯಾಧ್ಯಕ್ಷ ರಾದ ಕುಲಕರ್ಣಿ, ಜನತಾ ದಳದ ಮಹಿಳಾ ಜಿಲ್ಲಾಧ್ಯಕ್ಷೆ ಮೇಘಾ ಕುಂದರಗಿ, ಸಿ.ಬಿ.ಅಂಬೋಜಿ, ರಿಯಾಜ ಪಟೇಲ, ಚಂದ್ರಪ್ಪಾ ಚಲವಾದಿ, ಪಪ್ಪು ತಾಶೆವಾಲೆ, ಉಪಸ್ತಿತರಿದ್ದರು.