SHARE

ಬೆಳಗಾವಿ: ಜಾಗತಿಕ ಪೃತ್ವಿ ದಿನದ ಅಂಗವಾಗಿ ಸಮೀಪದ ಭೂತರಾಮನಹಟ್ಟಿ ಪ್ರಾಣಿಸಂಗ್ರಹಾಲಯದಲ್ಲಿ ಸಸಿ ನೆಟ್ಟು ಆಚರಿಸಲಾಯಿತು. ರಾಜ್ಯ ಎಪಿಸಿಸಿಎಫ್ ಹಾಗೂ ಝೂ ಪ್ರಾಧಿಕಾರದ ನಿರ್ದೇಶಕ ಬಿ. ಪಿ.ರವಿ ಸಸಿ ನೆಟ್ಟರು. ಭೂ ಉಷ್ಣ ಹೆಚ್ಚಿ ವಾತಾವರಣದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳು ಹಾಗೂ ಜೀವಕುಲದ ಮೇಲೆ ಆಗುತ್ತಿರುವ ಪ್ರಕೃತಿ ವಿಕೋಪಗಳ ಬಗ್ಗೆ ಜನತೆ ಗಮನ ಇಡಬೇಕು ಎಂದು ಎಪಿಸಿಸಿಎಫ್ ರವಿ ಕರೆ ನೀಡಿದರು.

ಮಿನಿ ಪ್ರಾಣಿ ಸಂಗ್ರಹಾಲಯಕ್ಕೆ ಮುಂದಿನ ದಿನಗಳಲ್ಲಿ ಹುಲಿ ಸೇರಿದಂತೆ ಮತ್ತಿತರ ಕ್ರೂರ ಪ್ರಾಣಿಗಳನ್ನು ತಂದಿರಿಸಿ ಝೂ ಉನ್ನತ ಮಟ್ಟಕ್ಕೇರಿಸುವ ಪ್ರಯತ್ನ ನಡೆದಿದ್ದು, ಕೇಂದ್ರ ಝೂ ಪ್ರಾಧಿಕಾರದಿಂದ ಅಗತ್ಯ ಸಹಾಯ ಸಹಕಾರ ಸಹ ನಿರೀಕ್ಷಿಸಲಾಗುತ್ತಿದೆ ಎಂದರು. ಡಿಸಿಎಫ್ ಎಂ. ವಿ. ಅಮರನಾಥ, ಎಸಿಎಫ್ ಎಸ್. ಎಂ. ಸಂಗೊಳ್ಳಿ, ಆರ್ ಎಫ್ ಓ ಶ್ರೀನಾಥ ಕಡೋಲಕರ, ಎಂ. ಬಿ. ಕುಸನಾಳ, ನಾಗರಾಜ ಬಾಳೆಹೊಸೂರ, ನಾಗರಾಜ ಭೀಮಗೋಳ, ಪ್ರಭಾಕರ ಸಂಗಮೇಶ ಹಾಗೂ ಇತರ ಅರಣ್ಯ ವಲಯದ ಸಿಬ್ಬಂಧಿ ಉಪಸ್ಥಿತರಿದ್ದರು.