SHARE

ಬೆಳಗಾವಿ: SSLC ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಜಿಲ್ಲೆ ಕಳಪೆ ಶೈಕ್ಷಣಿಕ ಪ್ರದರ್ಶನ ನೀಡಿದೆ. ಶೈಕ್ಷಣಿಕ ಜಿಲ್ಲೆ ರಾಜ್ಯಕ್ಕೆ 13ನೇ ಸ್ಥಾನ ಗಿಟ್ಟಿಸಿದರೆ, ಬೆಳಗಾವಿ ಜಿಲ್ಲೆ 24ನೇ ಸ್ಥಾನದತ್ತ ಇಳಿಮುಖ ಮಾಡಿದೆ. SSLCಯಲ್ಲಿ ಸತತ ಮುನ್ನಡೆಯಲ್ಲಿದ್ದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಫಲಿತಾಂಶ ಶಿಕ್ಷಣಾಧಿಕಾರಿಗಳಿಗೆ ಇಂದು ಪೆಚ್ಚು ಮೋರೆ ಸೃಷ್ಟಿಸಿದೆ. ಪಿಯುಸಿಯಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದ ಜಿಲ್ಲೆ ಈಗ ಎಸ್ಸೆಸ್ಸೆಲ್ಸಿ ಫಲಿತಾಂಶ ಸಮಾಧಾನ ಸಹ ನೀಡುವಲ್ಲಿಯೂ ವಿಫಲವಾಗಿದೆ.