SHARE

ಬೆಳಗಾವಿ: ಮುಸ್ಲಿಂ ಬಾಂಧವರ ಪವಿತ್ರ ತಿಂಗಳು ರಮಝಾನ ಪ್ರಾರಂಭವಾಗಿದೆ. ನಗರದಾದ್ಯಂತ ಇಂದು ಚಂದ್ರ ದರ್ಶನವಾಗಿದೆ. ಇಲ್ಲಿನ ವೀರಭದ್ರನಗರ, ಗಾಂಧೀನಗರ, ಆಜಂ ನಗರ, ಖಡೇ ಬಜಾರ ಮತ್ತಿತರ ಪ್ರದೇಶಗಳಲ್ಲಿ ಜನರು ತಮ್ಮ ತಮ್ಮ ಟೇರೆಸಿನಲ್ಲಿ ಸಂಜೆಯಿಂದಲೇ ಜಮಾಯಿಸದ್ದ ಜನರು ಚಂದ್ರನನ್ನು ನೋಡಿ ಪರಸ್ಪರ ಶುಭಾಷಯ ವಿನಿಮಯಿಸಿಕೊಂಡರು. ಇಂದು ಸಾಯಂಕಾಲ 7 ಗಂಟೆಯಿಂದ ಒಂದು ತಿಂಗಳುಗಳ ಕಾಲ ರಮಝಾನ ತಿಂಗಳು ಇರಲಿದ್ದು ಮೂವತ್ತು ದಿನಗಳ ಕಾಲ ಮುಸ್ಲಿಂ ಬಾಂಧವರು ಉಪವಾಸವಿರಲಿದ್ದಾರೆ. ನಂತರ ರಮಝಾನ ಈದ ಆಚರಿಸಲಾಗುವುದು. ಈ ಬಗ್ಗೆ ಅಂಜುಮನ್ ಸಂಸ್ಥೆವತಿಯಿಂದ ಅಧಿಕೃತ ಘೋಷಣೆಯಾಗಿದೆ.