SHARE

ಬೆಳಗಾವಿ: ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ ನೀರು ಬಿಡುವ ಸಂಬಂಧ ಇಂದು ಬೆಳಗಾವಿಯಲ್ಲಿ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್​​ ವಿಜಯಪುರ, ಬೆಳಗಾವಿ ‌ಹಾಗೂ ಬಾಗಲಕೋಟ ಜಿಲ್ಲೆಯ ಶಾಸಕರು, ಸಂಸದರು ಮತ್ತು ಸಚಿವರ ಜೊತೆ ಬೆಳಗಾವಿಯ ನೀರಾವರಿ ನಿಗಮದ ಕಚೇರಿಯಲ್ಲಿ ಚರ್ಚೆ ನಡೆಸಿದರು.

ಇದೇ ವೇಳೆ ಸಭೆಯಲ್ಲಿ ಸಚಿವ ಡಿಕೆ ಶಿವಕುಮಾರ್ ಹಾಸ್ಯ ಚಟಾಕಿ ಹಾರಿಸಿದರು. ಪಕ್ಕದಲ್ಲಿ ಕುಳಿತಿದ್ದ ಸಚಿವ ಸತೀಶ್ ಜಾರಕಿಹೊಳಿಗೆ ಮೈದವಡಿಸಿದರು. ಗಂಭೀರವಾಗಿ ಕುಳಿತಿದ್ದ ಸಚಿವ ಸತೀಶ್ ಜಾರಕಿಹೊಳಿಗೆ ಸ್ವಲ್ಪ ನಗಪ್ಪ ಎಂದು ಹಾಸ್ಯ ಚಟಾಕಿ ಹಾರಿಸಿ ಸಾಹುಕಾರರನ್ನು ಸರಿಯಾಗಿ ಕ್ಯಾಮೆರಾದಲ್ಲಿ ತೋರಿಸಿ. ಇವರು ನಮಗೆ ಸ್ಪೆಷಲ್, ಇವರ ನಗುಮುಖ ತೋರಿಸಿ ಎಂದು ಕ್ಯಾಮೆರಾಮನ್ ಗಳಿಗೆ ಹೇಳಿದರು.