SHARE

ಬೆಂಗಳೂರು: ಡಿಸೆಂಬರ್​ 8, 2018ರಂದು ರಾಧಿಕಾ ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದ್ರು. ಯಶ್​ಗೆ ಕೆಜಿಎಫ್ ಸಿನಿಮಾ​​​ ರಿಲೀಸ್​ನ ಉತ್ಸಾಹ ಒಂದೆಡೆಯಾದ್ರೆ, ತನ್ನ ಆಸೆಯಂತೆ ಪುಟ್ಟ ಸಿಂಡ್ರೆಲ್ಲಾ ಬಂದಿದ್ದು ಮತ್ತಷ್ಟು ಖುಷಿ ತಂದಿತ್ತು. ಅಕ್ಷಯ ತೃತಿಯಾ ದಿನದಂದು ಮಗಳ ಫೋಟೋ ರಿವೀಲ್ ಮಾಡೋದಾಗಿ ರಾಧಿಕಾ ಹೇಳಿದ್ದರು. ಅದರಂತೆ ಇಂದು ಮಗಳ ಫೋಟೋ ರಿಲೀಸ್​ ಮಾಡಿರೋದು ಅಭಿಮಾನಿಗಳಿಗೆ ಖುಷಿ ತಂದಿದೆ.

ಇದೇ ಮೊದಲ ಬಾರಿಗೆ ರಾಕಿಂಗ್​ ಸ್ಟಾರ್​ ಯಶ್​ ತಮ್ಮ ಮುದ್ದು ಮಗಳ ಫೋಟೋವನ್ನ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಟ್ವಿಟರ್​ನಲ್ಲಿ ಪುತ್ರಿಯ ಫೋಟೋವನ್ನು ಶೇರ್​​​ ಮಾಡಿರೋ ಯಶ್​, ನನ್ನ ಜಗತ್ತನ್ನು ಆಳೋ ಹುಡುಗಿ ನಿಮ್ಮ ಮುಂದೆ ಬಂದಿದ್ದಾಳೆ ಅಂತ ಬರೆದುಕೊಂಡಿದ್ದು ಮಗಳಿಗೆ ಇನ್ನೂ ಹೆಸರಿಡದ ಕಾರಣ ಸದ್ಯಕ್ಕೆ YR ಎಂದು ಕರೆಯೋಣ. ನಿಮ್ಮ ಪ್ರೀತಿ, ಆಶೀರ್ವಾದ ಆಕೆಗೂ ನೀಡಿ ಎಂದು ಟ್ವೀಟ್​ ಮಾಡಿದ್ದಾರೆ.