SHARE

ಬೆಳಗಾವಿ: ಬಡ್ತೀ ಮೀಸಲಾತಿ ಕಾಯ್ದೆಗೆ ಪುರಸ್ಕಾರ ನೀಡಿದ ಸುಪ್ರೀಂ ಕ್ರಮ ಸ್ವಾಗತಿಸಿ ನಗರದ ಡಾ‌. ಅಂಬೇಡ್ಕರ್ ಉದ್ಯಾನದಲ್ಲಿ ಸಿಹಿ ಹಂಚಿ ಸಂಭ್ರಮ ಪಡಲಾಯಿತು. ಸಾರಿಗೆ ಇಲಾಖೆ ಎಸ್ ಟಿ ನೌಕರರ ಸಂಘದ ಅಧ್ಯಕ್ಷ ಸಿದ್ರಾಯಿ ಶೀಗಿಹಳ್ಳಿ ಮಾತನಾಡಿ ದಲಿತ ಮತ್ತು ಅಲೆಮಾರಿ ವರ್ಗಗಳ ಸರಕಾರಿ ನೌಕರರಿಗೆ ಆಗಿದ್ದ ಅನ್ಯಾಯ ಸರಪಡಿಸಲು ಸರಕಾರ ಮತ್ತು ಸುಪ್ರೀಂ ನಿರ್ಧಾರವನ್ನು ಮನಃಪೂರ್ವಕವಾಗಿ ಸ್ವಾಗತಿಸುತ್ತೇವೆ. ದಲಿತ ವರ್ಗಗಳ ನೌಕರರ ಆತ್ಮಸ್ಥೈರ್ಯ ಹೆಚ್ಚಿಸುವಲ್ಲಿ ಇಂದಿನ ಸುಪ್ರೀಂ ನಿರ್ಧಾರ ಅಭಿನಂದನೀಯ ಎಂದರು. ರಾಜೇಂದ್ರ ಪಂಗನ್ನವರ, ನಾಮದೇವ ಮಾಳಗಿ, ಎಲ್. ಎಸ್. ಪಂಗನ್ನವರ, ಶಿವಾನಂದ ಗೆಜ್ಜಿ, ವಿಜಯ ಕಾಂಬಳೆ, ಶಶಿಪಾಲ ಶಿಂಗೆ ಹಾಗೂ ಇತರರು ಉಪಸ್ಥಿತರಿದ್ದರು.