SHARE

ಬೆಳಗಾವಿ: O+ ಇಲ್ಲವೇ O- ಸಹ ಅಲ್ಲದ ಹೊಸ ಹೆಸರಿನ ‘ಮುಂಬಯಿ’ ಬ್ಲಡ್ ಗ್ರುಪ್ ಎಂಬ ಹೊಸ ಬ್ಲಡ್ ಗ್ರುಪ್ ಪ್ರತಿ ಹತ್ತು ಲಕ್ಷಕ್ಕೆ ಒಬ್ಬರಿಗೆ ಇರುವ ಸಂಭವವಿರುತ್ತದೆ ಎಂದು VOTC ನಿರ್ದೇಶಕ ಡಾ. ರವಿ ಪಾಟೀಲ ತಿಳಿಸಿದರು.

ಇಂದು ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಅವರು ಬಹಳವೇ ಅಪರೂಪದಲ್ಲಿ ಅಪರೂಪ ಎಂಬ ಈ ರಕ್ತದ ಮಾದರಿಯನ್ನು ಮೊದಲು ಮುಂಬಯಿನಲ್ಲಿ ಸಂಶೋಧಿಸಲಾಯಿತು. ಈ ರಕ್ತ ಗುಂಪಿನ ಜನರಿಗೆ ರಕ್ತ ಬೇಕಾದರೆ ಸಹಾಯಕ್ಕೆ ಅಂತಹದ್ದೇ ರಕ್ತವುಳ್ಳ ದಾನಿಗಳು ದೇಶದಲ್ಲಿ ಎಲ್ಲೆಂದರಲ್ಲಿ ತೆರಳಿ ರೋಗಿಗಳಿಗೆ ರಕ್ತದಾನ ಮಾಡುವ ಪ್ರಕ್ರಿಯೆ ನಡೆದಿದೆ ಎಂದರು. ‘ಮುಂಬಯಿ ಬ್ಲಡ್’ನ ನೆಗೆಟಿವ್ ಗ್ರುಪ್ ಹೊಂದಿದವರು ಯಾರಿಗೆ ಬೇಕಾದರೂ ತಮ್ಮ ರಕ್ತ ಕೊಡಬಹುದು, ಆದರೆ ಇತರ ವರ್ಗದ ರಕ್ತದ ಮಾದರಿ ಸ್ವೀಕರಿಸಲಾರರು ಎಂದರು.

ಕೊಲ್ಲಾಪುರದಿಂದ ಆಗಮಿಸಿದ Mumbai Blood Group ಹೊಂದಿರುವ ಕೊಲ್ಲಾಪುರದ ದಾನಿ ಸುನೀಲ ಭೋಸಲೆ ಎಂಬುವವರು ಇಂದು ಬೆಳಗಾವಿಗೆ ಆಗಮಿಸಿ ರಕ್ತದಾನ ಮಾಡಿ ಗಮನ ಸೆಳೆದರು. ರಕ್ತದಾನಿ ಸುನೀಲ ಭೋಸಲೆ ಅವರನ್ನು VOTC ಪರವಾಗಿ ಸನ್ಮಾನಿಸಲಾಯಿತು. ಬೆಳಗಾವಿಯಲ್ಲಿ ಬಾಂಬೆ ಬ್ಲಡ್ ಗ್ರುಪ್ ಹೊಂದಿದವರ ಅಸೋಸಿಯೇಷನ್ ಬೆಳಗಾವಿಯಲ್ಲಿ ಸ್ಥಾಪಿಸಲಾಗುವುದು ಎಂದು ಘೋಷಿಸಿದರು. ರಾಯಭಾಗ ಮೂಲದ ಜನಾರ್ಧನ ವೆಂಜೇರಿ ಎಂಬುವವರಿಗೆ ಜಾಂಬೋಟಿ ಬಳಿ ಶನಿವಾರ ನಡೆದ ಅಪಘಾತದಲ್ಲಿ ತುರ್ತು ರಕ್ತ ಬೇಕಾಗಿತ್ತು. ಗಾಯಾಳುವಿನ ರಕ್ತದ ಮಾದರಿ ಮುಂಬಯಿ ಬ್ಲಡ್ ಗ್ರುಪ್ ಎಂಬುವುದು ಬೆಳಕಿಗೆ ಬರುತ್ತಿದ್ದಂತೆ ಕೊಲ್ಲಾಪುರದಿಂದ Bombay blood group association ಸದಸ್ಯ ದಾನಿಯನ್ನು ಕರೆಸುವಲ್ಲಿ VOTC ಯಶಸ್ವಿಯಾಗಿದೆ. ನ್ಯಾಯವಾದಿ ಬಸವರಾಜ ರೊಟ್ಟಿ ಇತರರು ಉಪಸ್ಥಿತರಿದ್ದರು.