SHARE

ಬೆಳಗಾವಿ: ಕಿಲ್ಲಾ ಬಳಿಯ ದಂಡುಮಂಡಳಿ ಪ್ರದೇಶದ ತರಕಾರಿ ಮಾರುಕಟ್ಟೆ ಸ್ಥಳಾಂತರ ಯಾರು ಮಾಡುತ್ತಾರೆ ಎಂದು ಪ್ರಶ್ನಿಸಲಾಗಿದೆ. ಇಂದು ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ. ಕೆ. ಬಾಗವಾನ ತರಕಾರಿ ಮಾರುಕಟ್ಟೆಯನ್ನು ನಗರದ ಎಪಿಎಂಸಿ ಆವರಣಕ್ಕೆ ಸ್ಥಳಾಂತರ ಮಾಡಲಾಗುತ್ತದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಎಂದು ಹರಿಹಾಯ್ದರು. ಇಂತಹ
ಸ್ಥಳಾಂತರ ನಿರ್ಧಾರದ ವಿರುದ್ಧ ಸೋಮವಾರ ವ್ಯಾಪಾರಿಗಳಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು. ದೀವಾಕರ ಪಾಟೀಲ, ಮೋಹನ ಮನೋಳ್ಕರ್, ರಾಮ ಹವಳ, ಇಕ್ಬಾಲ ಡೋಣಿ, ಸುನೀಲ ಭೋಸಲೆ, ಸುರೇಶ ಹವಳ, ಸಂಜಯ ಭಾಬಿ, ವಿಶ್ವನಾಥ ಪಾಟೀಲ, ರಾಜು ಡೋಣಿ ಇತರರು ಉಪಸ್ಥಿತರಿದ್ದರು.