SHARE

ಬೆಳಗಾವಿ: ದಲಿತರ ಏಳ್ಗೆಗಾಗಿ ಅಂದಿನ ಡಿಜಿಪಿ ಓಂಪ್ರಕಾಶ ಅವರು ನೀಡಿದ್ದ ಸೂಚನೆಯನ್ನು ಪೊಲೀಸ್ ಇಲಾಖೆ ಯಥಾವತ್ತಾಗಿ ಆಚರಣೆಗೆ ತರಬೇಕು ಎಂದು ಜಿಲ್ಲಾ ಪರಿಶಿಷ್ಠ ಪಂಗಡಗಳ ಸರಕಾರಿ ನೌಕರರ ಸಂಘ ಆಗ್ರಹಿಸಿದೆ. ಪ್ರತಿ ತಿಂಗಳ ಎರಡನೇ ಭಾನುವಾರ ಪೊಲೀಸ್ ಠಾಣೆಗಳಲ್ಲಿ ‘ದಲಿತ ದಿನ’ ಆಚರಿಸುವಂತೆ ಅಂದಿನ ಡಿಜಿಪಿ ಓಂಪ್ರಕಾಶ ಸೂಚಿಸಿದ ಬಗ್ಗೆ ಉಲ್ಲೇಖಿಸಿ ಮಾರ್ಕೆಟ್ ಪೊಲೀಸ್ ಠಾಣೆಗೆ ಇಂದು ಮನವಿ ಸಲ್ಲಿಸಲಾಗಿದೆ.

ಇಂದು ದಲಿತ ವರ್ಗದ ಜನತೆ ಅನೇಕ ಸಾಮಾಜಿಕ ಪಿಡುಗುಗಳು, ಸಂಕಷ್ಟ ಆತಂಕದಲ್ಲಿ ಬದುಕುವಂತಾಗಿದ್ದು ಗಮನಾರ್ಹ, ಇಂತಹ ಸಂದರ್ಭ ಪೊಲೀಸ್ ಇಲಾಖೆ ದಲಿತ ದಿನ ಆಚರಿಸಿ ಕುಂದುಕೊರತೆ ಆಲಿಸಬೇಕು ಎಂದು ಕೆಎಸ್ ಆರ್ ಟಿಸಿ ಎಸ್ ಟಿ ಘಟಕದ ಜಿಲ್ಲಾಧ್ಯಕ್ಷ ಶಿದ್ರಾಯಿ ಪಿ. ಶೀಗಿಹಳ್ಳಿ ತಿಳಿಸಿದರು. ನಗರದ ಮಾರ್ಕೇಟ್ ಪೊಲೀಸ್ ಠಾಣೆಯಲ್ಲಿ ಸಂಘದ ವತಿಯಿಂದ ದಲಿತರ ದಿನ ಆಚರಣೆ ಆಚರಿಸುವ ಮೂಲಕ ಕುಂದುಕೊರತೆ ಆಲಿಕೆ ಪ್ರಾರಂಭಿಸುವಂತೆ ಮನವಿ ಮಾಡಲಾಯಿತು. ರಾಜೀವ ಪನ್ಯಾಗೋಳ, ಕುಪೇಂದ್ರ ರಾಠೋಡ್, ಡಿ. ಎನ್. ಕಾಂಬಳೆ, ವಿಜಯ ಚಲವಾದಿ, ಎಂ. ಬನ್ನಿಕೊಪ್ಪ, ಟಿ. ಕೆ. ಚವ್ಹಾನ, ಗಜು ಧರನಾಯಕ, ಬಸವರಾಜ ಬಡನಾಯಕ, ರಾಜೇಂದ್ರ ಪಂಗನ್ನವರ ಇತರರು ಉಪಸ್ಥಿತರಿದ್ದರು.