SHARE

ಬೆಳಗಾವಿ: ಕಾಂಟೊನ್ಮೆಂಟ್ ಪ್ರದೇಶದ ಭಾಜಿ ಮಾರ್ಕೆಟ್ ಎತ್ತಂಗಡಿ ಮಾಡದಂತೆ ಆಗ್ರಹಿಸಿ ಮರ್ಚೆಂಟ್ಸ್ ಅಸೋಸಿಯೇಶನ್ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ನೂರಾರು ವ್ಯಾಪಾರಿಗಳು ಇಂದು ಭಾಜಿ ಮಾರ್ಕೇಟನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಡಾ. ಆರ್. ವಿಶಾಲ ಮನವಿ ಸ್ವೀಕರಿಸಿ ಪರಿಶೀಲಿಸುವುದಾಗಿ ಪ್ರತಿಭಟನಾಕಾರರಿಗೆ ತಿಳಿಸಿದರು. ನ್ಯಾಯವಾದಿ ಎ. ಜಿ. ಮುಳವಾಡಮಠ, ಕೆ. ಕೆ. ಬಾಗವಾನ ಹಾಗೂ ವ್ಯಾಪಾರಿಗಳು ಭಾಗವಹಿಸಿದರು. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.