SHARE

ಬೆಳಗಾವಿ: ಕಾಂಗ್ರೆಸಗೂ ಆಪರೇಷನ್ ಮಾಡೋದು ಗೊತ್ತಿದೆ, ಬಿಜೆಪಿ ಶಾಸಕರೂ ಸಹ ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ. ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಆಪರೇಷನ್ ಕಮಲ ಯತ್ನ ನೋಡುತ್ತ ಕಾಂಗ್ರೆಸ್ ಸುಮ್ಮನೆ ಕುಳಿತಿಲ್ಲ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು. ಕಾಂಗ್ರೆಸ್ ಭಿನ್ನಾಭಿಪ್ರಾಯಗಳು ಶಮನವಾಗುತ್ತವೆ ಎಂದ ಅವರು ಎಕ್ಸಿಟ್ ಪೋಲ್ ನಂತರದ ರಾಜಕೀಯ ಬೆಳವಣಿಗೆಗಳು ಸರಕಾರವನ್ನು ಏನೂ ಮಾಡೊಕ್ಕಾಗಲ್ಲ ಎಂದರು. ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಭೇಟಿಗೆ ತೆರಳಿದ ಶಾಸಕ ರಮೇಶ ಜಾರಕಿಹೊಳಿ ಅವರ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.