SHARE

ಬೆಳಗಾವಿ: ಕಿತ್ತೂರು ಸಮೀಪದ ಶಿವ ಪೆಟ್ರೋಲ್ ಬಂಕನಲ್ಲಿ ತಡರಾತ್ರಿ ಪಾಳಿ ಕೆಲಸಗಾರರಿಬ್ಬರನ್ನು ಬರ್ಬರ ಹತ್ಯೆ ಮಾಡಲಾಗಿದೆ. ಮಂಗಳವಾರ ತಡರಾತ್ರಿ ದುಷ್ಕರ್ಮಿಗಳು ಮಲಗಿದವರನ್ನು ಕಗ್ಗೊಲೆ ಮಾಡಿದ್ದಾರೆ. ಲಿಂಗದಳ್ಳಿಯ ಮಂಜುನಾಥ್ ಪಟ್ಟಣಶೆಟ್ಟಿ (22) ಮತ್ತು ಕಿತ್ತೂರು ತಾಲೂಕು ತಿಗಡೊಳ್ಳಿ ಗ್ರಾಮದ ಮುಸ್ತಾಕ ಬೀಡಿ (32) ಕೊಲೆಯಾದವರು ಎಂದು ಗುರುತಿಸಲಾಗಿದೆ. ಕಿತ್ತೂರು ಹಾಗೂ ಧಾರವಾಡ ಪೊಲೀಸರು ಪರಿಶೀಲನೆ ನಡೆಸಿದರು.