SHARE

ಬೆಳಗಾವಿ: ಚುನಾವಣಾ ನೀತಿ ಸಂಹಿತೆ ಮುಗಿದ ತತಕ್ಷಣ ಬೆಂಡಿ ಬಜಾರ್ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ಶಾಸಕ ಅನಿಲ ಬೆನಕೆ ತಿಳಿಸಿದ್ದಾರೆ. ಪಾಂಗೂಳಗಲ್ಲಿ ಮಾಸ್ಟರ್ ಪ್ಲಾನ್ ಮೂಲಕ ಅಭಿವೃದ್ಧಿಪಡಿಸಿದಂತೆ, ಬೆಂಡಿ ಬಜಾರ್ ಸಹ ಅಭಿವೃದ್ದಿ ಮಾಡಲಾಗುತ್ತದೆ ಎಂದರು.

ಶ್ರೀನಗರದಲ್ಲಿ ನಿರ್ಮಾಣವಾಗಿರುವ ಆಶ್ರಯ ಮನೆಗಳಿಗೆ ಹೊಸದಾಗಿ ಪಟ್ಟಿ ಸಿದ್ಧಪಡಿಸಿ ನಿಜವಾದ ಬಡ ಫಲಾನುಭವಿಗಳಿಗೆ ಮನೆಗಳ ಹಂಚಿಕೆ ಮಾಡಲಾಗುತ್ತದೆ ಎಂದು ಶಾಸಕ ಅನಿಲ ಬೆನಕೆ ಅವರು ಸ್ಪಷ್ಟ ಪಡಿಸಿದರು. ನಗರದ ಶ್ರೀನಗರದಲ್ಲಿ ರಾಜೀವ ಗಾಂಧಿ ಆವಾಸ್ ಯೋಜನೆಯಡಿ 272 ಆಶ್ರಯ ಮನೆಗಳು ನಿರ್ಮಾಣವಾಗಿ ನಾಲ್ಕು ವರ್ಷಗಳು ಕಳೆದರೂ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾತ್ರ ಇನ್ನು ಮಾಡಿಲದರ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಅನಿಲ ಬೆನಕೆ ಬಡವರು, ಸೂರಿಲ್ಲದ ಅರ್ಹ ಫಲಾನುಭವಿಗಳ ಹೊಸ ಪಟ್ಟಿಯನ್ನು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತಯಾರಿಸಿ ನೀತಿಸಂಹಿತೆ ಮುಗಿದ ಬಳಿಕ ವಿತರಿಸಲಾಗುವುದು ಎಂದು ತಿಳಿಸಿದರು.