SHARE

ಬೆಳಗಾವಿ: ತಾನು ಶಾಸಕನಾಗಿ ಕಳೆದ ಒಂದು ವರ್ಷದಲ್ಲಿ ನಗರವನ್ನು ಶಾಂತವಾಗಿಡಲು ಯಶಸ್ವಿಯಾಗಿದ್ದೇನೆಂದು ಉತ್ತರ ಶಾಸಕ ಅನಿಲ ಬೆನಕೆ ತಿಳಿಸಿದ್ದಾರೆ. ಇಂದು ಒಂದು ವರತಷದ ಸಾಧನೆಗಳ ಅನಾವರಣಗೊಳಿಸಿದ ಅವರು ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಯಾವುದೇ ಒಂದು ಕೋಮುಗಲಭೆ, ಅಶಾಂತಿ ಘಟನೆಗಳು ನಡೆದಿಲ್ಲ, ಒಂದು ಸಣ್ಣ ಕಲ್ಲು ತೂರಾಡಿದ ಪ್ರಕರಣಗಳು ಬೆಳಕಿಗೆ ಬಂದಿಲ್ಲ ಎಂದರು. ಗೋವಾದಿಂದ ಗ್ರಾಹಕರು ಹೆಚ್ಚುತ್ತಿದ್ದು ಇದರಿಂದ ನಗರದಲ್ಲಿ ವ್ಯಾಪಾರ ವಹಿವಾಟು ಹೆಚ್ಚಿದೆ ಎಂದರು. ನಗರದಲ್ಲಿ ಶಾಂತಿ ವಾತಾವರಣ ನಿರ್ಮಾಣವಾಗಿದ, ನನ್ನ ಹಿಂದಿನ ಅವಧಿಯಲ್ಲಿ ನಗರದಲ್ಲಿ ಸಾಕಷ್ಟು ದಂಗೆಗಳು ನಡೆದ ಬಗ್ಗೆ ಉಲ್ಲೇಖಿಸಿದರು. ಈ ಹಿಂದೆ ಬೆಳಗಾವಿ ನಗರದಲ್ಲಿ ಕೋಮುಗಲಭೆಗಳು ಹೆಚ್ಚಾಗಿದ್ದವು, ನಾನು ಶಾಸಕನಾದ ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳು, ಜಿಲ್ಲಾಡಳಿತದ ಸಹಕಾರದಿಂದ ನಗರದಲ್ಲಿ ಶಾಂತಿ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದರು.

ಅದೇ ರೀತಿ ನಗರದಲ್ಲಿ ತಲೆ ಎತ್ತಿದ್ದ ಅಕ್ರಮ ಕಸಾಯಿಖಾನೆಗಳನ್ನು ಬಂದ್ ಮಾಡಲು ಸುಪ್ರೀಂಕೋರ್ಟನಲ್ಲಿ ನಾನೇ ಬಡಿದಾಡಿದ ಪರಿಣಾಮ 8 ಅಕ್ರಮ ಕಸಾಯಿಖಾನೆಗಳ ಬಾಗಿಲು ಮುಚ್ಚಿಸಲಾಗಿದೆ. ಬೆಳಗಾವಿ ನಗರವನ್ನು ಸಾರಾಯಿ, ಗಾಂಜಾ ಮುಕ್ತ ಮಾಡಲು ಪಣ ತೊಟ್ಟಿದ್ದು, ಪ್ರತಿಯೊಂದು ಮಗುವು ಶಿಕ್ಷಣ ವಂಚಿತವಾಗದಂತೆ ಮತ್ತು ಭಿಕ್ಷಾಟನೆಯನ್ನು ನಗರದಿಂದ ಕಿತ್ತೊಗೆಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.