SHARE

ಬೆಳಗಾವಿ: ಮಹಾರಾಷ್ಟ್ರ ಸರಕಾರಕ್ಕೆ ಸಾಕಷ್ಟು ಮಾತುಕತೆ ನಡೆಸಿದರೂ ಏನೂ ಪ್ರಯೋಜನವಾಗುತ್ತಿಲ್ಲ ಎಂದು ರಾಜ್ಯ ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ ಖೇದ ವ್ಯಕ್ತಪಡಿಸಿದ್ದಾರೆ. ಇಂದು ಪ್ರಸೆಸ್ ರಿಲೀಸ್ ವೇಳೆ ಮಾತನಾಡಿ ಕರ್ನಾಟಕ ಸರಕಾರ ಮಹಾರಾಷ್ಟ್ರ ಸರಕಾರಕ್ಕೆ ಹಲವು ಬಾರಿ ಕುಡಿಯಲು ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸುವಂತೆ ಕೋರಿದ್ದೇವೆ. ಆದರೆ ಮಹಾರಾಷ್ಟ್ರ ಸರಕಾರ ನೀರಿಗೆ ನೀರು ಎನ್ನುತ್ತಿದೆ. ಜೊತೆಗೆ ಇನ್ನೂವರೆಗೂ ನೀರು ಬಿಡುವ ಮನಸ್ಸು ಮಹಾರಾಷ್ಟ್ರಕ್ಕೆ ಇಲ್ಲ. ನಮ್ಮ ಅಥಣಿ ಕಾಗವಾಡ ಭಾಗದ ಜನರ ಕುಡಿಯುವ ನೀರಿಗಾಗಿ ಹಿಡಕಲ್ ಡ್ಯಾಂನಿಂದ 1ಟಿಎಂಸಿ ನೀರು ಬಿಡಲು ನಮ್ಮ ಅಧಿಕಾರಿಗಳಿಗೆ ಆದೇಶಿಸಿದ್ದೇನೆ ಎಂದು ನುಡಿದರು.