SHARE

ಬೆಳಗಾವಿ: ಬೈಪಾಸ್ ರಸ್ತೆಗಾಗಿ ಜಮೀನು ಕಸಿಯುವ ಸರಕಾರದ ನಿರ್ಧಾರ ವಿರೋಧಿಸಿ ನಡೆದಿರುವ ಹೋರಾಟ ಮತ್ತೆ ಇಂದು ಡಿಸಿ ಕಚೇರಿಗೆ ಲಗ್ಗೆ ಇಟ್ಟಿತು. ಇಲ್ಲಿನ ಹಲಗಾ-ಮಚ್ಛೆ (ದೇಸೂರು) ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಬೈಪಾಸ್ ರಸ್ತೆಗೆ ಜಮೀನು ನೀಡದಿರಲು ನಿರ್ಧರಿಸಿರುವ ರೈತರು ಮತ್ತು ಪೊಲೀಸರ ನಡುವೆ ಹಲವು ದಿನಗಳಿಂದ ಘರ್ಷಣೆ ನಡೆದಿದ್ದು, ಇಂದು ಕೆಲ ರೈತರು ಕುತ್ತಿಗೆಗೆ ಹಗ್ಗ ಬಿಗಿದು ಡಿಸಿ ಕಚೇರಿ ಎದುರು ಕುಳಿತು ಪ್ರತಿಭಟನೆ ನಡೆಸಿದರು.