SHARE

ನವದೆಹಲಿ: ಲೋಕಸಭಾ ಚುನಾವಣೆಯ ಮತಎಣಿಕೆಯಲ್ಲಿ ಎನ್​​ಡಿಎ ಮೈತ್ರಿಕೂಟ ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ. ಹೀಗಾಗಿ ಇಸ್ರೇಲ್​ ಪ್ರಧಾನಿ ಬೆಂಜಮಿನ್​ ನೇತನ್ಯಾಹು ನರೇಂದ್ರ ಮೋದಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಸ್ನೇಹಿತ ನರೇಂದ್ರ ಮೋದಿ, ನಿಮ್ಮ ಅಭೂತಪೂರ್ವ ಚುನಾವಣಾ ಗೆಲುವಿಗೆ ಅಭಿನಂದನೆ. ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವದ ನಿಮ್ಮ ನಾಯಕತ್ವವನ್ನು ಈ ಚುನಾವಣೆ ಮತ್ತಷ್ಟು ದೃಢಪಡಿಸಿದೆ. ನಾವು ಒಟ್ಟಾಗಿ ಭಾರತ ಹಾಗೂ ಇಸ್ರೇಲ್​ ನಡುವಿನ ಸ್ನೇಹ ಸಂಬಂಧವನ್ನ ಉತ್ತಮಗೊಳಿಸಲು ಪ್ರಯತ್ನಿಸೋಣ. ವೆಲ್​ಡನ್​​ ಮೈ ಫ್ರೆಂಡ್​ ಅಂತಾ ಅವರು ಟ್ವೀಟ್​ ಮಾಡಿದ್ದಾರೆ. ಹಿಂದಿಯಲ್ಲೂ ಅವರು ಟ್ವೀಟ್​ ಮಾಡಿರೋದು ವಿಶೇಷ.