SHARE

ಬೆಳಗಾವಿ: ಕೇಂದ್ರ ರಾಜ್ಯ ರೈಲ್ವೇ ಸಚಿವರಾಗಿ ಅಧಿಕಾರ ಸ್ವೀಕರಿಸಿ ಇಂದು ಬೆಳಗಾವಿಗೆ ಆಗಮಿಸಿದ ಸಚಿವ ಸುರೇಶ ಅಂಗಡಿ ಸಾಂಬ್ರಾ ಮಹಾಲಕ್ಷ್ಮೀಗೆ ಸಪತ್ನಿಕರಾಗಿ ಪೂಜೆ ಸಲ್ಲಿಸಿದರು. ಸುರೇಶ ಅಂಗಡಿ ಅವರನ್ನು ಬಿಜೆಪಿ ಕಾರ್ಯಕರ್ತರು ಅಭೂತಪೂರ್ವ ಉತ್ಸಾಹದಿಂದ ಬರಮಾಡಿಕೊಂಡರು. ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸುರೇಶ ಅಂಗಡಿ ಅವರನ್ನು ಶಾಸಕ ಅಭಯ ಪಾಟೀಲ, ಅನಿಲ ಬೆನಕೆ ನೇತೃತ್ವದಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಬರಮಾಡಿಕೊಂಡರು.