SHARE

ಬೆಳಗಾವಿ: ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಆದೇಶದ ಮಧ್ಯೆಯೂ, ನ್ಯಾಯ ಸಿಗುವವರೆಗೂ ‘ಸಿವೇಜ್ ಪ್ಲಾಂಟ್’ ಮಾಡಲು ಬಿಡುವುದಿಲ್ಲ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಆಡಳಿತಕ್ಕೆ ಸವಾಲೆಸೆದಿದ್ದಾರೆ.

ಹಲಗಾ ಗ್ರಾಮದಲ್ಲಿ ನಿರ್ಮಾಣ ಮಾಡುತ್ತಿರುವ ‘ತ್ಯಾಜ್ಯ ಸಂಸ್ಕರಣಾ ಘಟಕ’ ಫಲವತ್ತಾದ ರೈತರ ಭೂಮಿ ಕಬಳಿಸುವ ಹುನ್ನಾರ ಎಂದು ಖೇದ ವ್ಯಕ್ತಪಡಿಸಿದ್ದಾರೆ. ರೈತರ ಜಮೀನು ಒತ್ತಾಯಪೂರ್ವಕ ತೆಗೆದುಕೊಳ್ಳದೆ ಅವರ ಮನವೊಲಿಸಿ ಹೆಚ್ಚಿನ ಬೆಲೆಗೆ ಸರಕಾರ ಕಂಡುಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ. ಅವರಿಗೆ ಹಚ್ಚಿನ ಪರಿಹಾರ ನೀಡಿ ಕಾಮಗಾರಿ ಪ್ರಾರಂಭಿಸೋಣ ಎನ್ನುವುದು ನನ್ನ ಅಭಿಪ್ರಾಯವಾಗಿದೆ ಎಂದು ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದ್ದಾರೆ. ಅರಣ್ಯ ಇಲಾಖೆ ಕಾರ್ಯಕ್ರಮದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ನಾನು ರೈತರಿಗೆ ಅನ್ಯಾಯ ಮಾಡಲು ಬೀಡುವುದಿಲ್ಲ. ಜಿಲ್ಲಾಡಳಿತದ ಮನವೊಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತಂದಿದ್ದೇನೆ ಎಂದರು.