SHARE

ಬೆಳಗಾವಿ: ಬೆಳಗಾವಿ ಜಿ.ಪಂ‌. ಅಧ್ಯಕ್ಷೆ ಆಶಾ ಐಹೊಳೆ ಅವರಿಗೆ ಈಗ ಬಂಧನದ‌ ಭೀತಿ ಎದುರಾಗಿದೆ! ನಿವೇಶನ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ ಆರೋಪದಡಿ ಜಿ.ಪಂ. ಅಧ್ಯಕ್ಷೆ ವಿರುದ್ಧ ಧರೆಪ್ಪ ಸತ್ಯಪ್ಪ ಸುನಾಳೆ ಎಂಬುವವರು ದೂರು‌ ದಾಖಲಿಸಿದ್ದರು. ಈ ನಡುವೆ ಆಶಾ ಐಹೊಳೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯೂ ವಜಾ ಆದ ವರದಿ ಬೆನ್ನಿಗೆ ಪೊಲೀಸ್ ತಪಾಸಣೆ ನಡೆಯುವ ಸಂಭವ ಹೆಚ್ಚಿದ್ದು, ಆಶಾ ಐಹೊಳೆ ಅಂಡರ್ ಗ್ರೌಂಡ್ ಆದ ಚರ್ಚೆ ವ್ಯಕ್ತವಾಗಿದೆ. ಪೊಲೀಸರು ಯಾವುದೇ ಕ್ಷಣದಲ್ಲಿ ಆಶಾ ಐಹೊಳೆ ಬಂಧಿಸುವ ಸಾಧ್ಯತೆ ದಟ್ಟವಾಗಿದೆ.

ಈ ಮೊದಲೇ ಆಶಾ ಪತಿ ಪ್ರಶಾಂತ ಐಹೊಳೆ ಆಕರ್ಷಕ ಬಡ್ಡಿದರ ಆಮಿಷವೊಡ್ಡಿ ಸಾವಿರಾರು ಗ್ರಾಹಕರಿಂದ ಲಕ್ಷಾಂತರ ರೂ. ಠೇವಣಿ ಸಂಗ್ರಹಿಸಿ ಅವಧಿ ಮುಗಿದರೂ ಗ್ರಾಹಕರಿಗೆ ಠೇವಣಿ ಹಣ ಮರಳಿಸಿಲ್ಲ ಎಂಬ ಆರೋಪದ ಮೇಲೆ ನ್ಯಾಯಾಂಗ ಬಂಧನದಲ್ಲಿದ್ದರು. ಪತಿಯಂತೆಯೇ ವಂಚನೆ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಆಶಾ ಐಹೊಳೆ ಜೈಲು ಸೇರುವುದು ಖಚಿತ ಎನ್ನಲಾಗುತ್ತಿದೆ. ಆಶಾ ಬಂಧನಕ್ಕೆ ‌ಅಥಣಿ‌ ಪೊಲೀಸರ ಕಾರ್ಯಾಚರಣೆ ತೀವ್ರ ಗೊಂಡಿದೆ..!