SHARE

ಬೆಳಗಾವಿ: ಆಪರೇಷನ್ ಕಮಲದ ಬಗ್ಗೆ ನನಗೆ ಹೇಸಿಗೆ ಆಗುತ್ತೆ ಎಂದು ಸಕ್ಕರೆ ಸಚಿವ ಆರ್. ಬಿ. ತಿಮ್ಮಾಪುರ ಅಸಮಧಾನ ವ್ಯಕ್ತಪಡಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕರನ್ನು ಒಡೆಯುವ ಅನೀತಿ ಕ್ರಮ ಸರಿಯಾದುದ್ದಲ್ಲ. ಆರಿಸಿದ ಜನರ ಬಗ್ಗೆ ಭಯ ಇಲ್ಲದೇ ಆಪರೇಷನ ಕಮಲ ಮಾಡುತ್ತಿದ್ದಾರೆ. ಅಧಿಕಾರಕ್ಕಾಗಿ ಕೆಲ ಶಾಸಕರು ಹೋಗಿದ್ದಾರೆ ಎಂದರು.

ಎಂಪಿ ಟಿಕೆಟ್ ಸಿಗಲ್ಲ ಎಂದು ಉಮೇಶ ಜಾಧವ ಬಿಜೆಪಿಗೆ ಹೋಗಿದ್ದಾರೆ. ಪ್ರಜಾಪ್ರಭುತ್ವ ಹಾಳು ಮಾಡುವ ವ್ಯವಸ್ಥೆ ಇದು ಎಂದರು. ಆಪರೇಷನ್ ಕಮಲ, ರಿವರ್ಸ್ ಆಪರೇಷನ್ ಎರಡೂ ತಪ್ಪು ಎಂದರು.