SHARE

ಖಾನಾಪುರ: ಸಮೀಪದ ಲಿಂಗನಮಠ ಗ್ರಾಮದ ನಿವಾಸಿ ಶಿವಲಿಂಗಪ್ಪ ಚನ್ನಪ್ಪ ಹಲಸಗಿ(೭೨) ಗ್ರಾಮದಲ್ಲಿ ದ್ವಿತೀಯ ದೇಹದಾನಿ ಬುಧವಾರ ಬೆಳಗಿನ ಜಾವದಲ್ಲಿ ಕೊನೆಯುಸಿರೆಳೆದರು. ಅವರು ತಮ್ಮ ದೇಹ ಹಾಗೂ ಚರ್ಮವನ್ನು ಮೊದಲೇ ದಾನ ಮಾಡುವುದರ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದು ಗ್ರಾಮದ ಪ್ರಪ್ರಥಮ ಚರ್ಮದಾನಿಯಾಗಿದ್ದಾರೆ.

ಮೃತರು ತಾವು ಮರಣಹೊಂದುವ ಮೊದಲು ತಮ್ಮ ಕುಟುಂಬಸ್ಥರಿಗೆ ಹಾಗೂ ಬದುಕಿನ ಕೊನೆಯ ದಿನಗಳಲ್ಲಿ ದೇಹ ದಾನ ಮಾಡುವ ಕುರಿತು ಲಿಖಿತವಾಗಿ ಬರೆದುಕೊಟ್ಟಿದ್ದರು. ಅವರಿಗೆ ಇಬ್ಬರು ಸಹೋದರರು,ಇಬ್ಬರು ಸಹೋದರಿಯರು, ಒಬ್ಬ ಪುತ್ರ,ಇಬ್ಬರು ಪುತ್ರಿಯರು ಇದ್ದಾರೆ.ಶಿವಲಿಂಗಪ್ಪ ಅವರ ನಿಧನದ ನಂತರ, ಡಾ.ರಾಮಣ್ಣವರ ಟ್ರಸ್ಟ್ ನ ಸಂಚಾಲಕ ಹಾಗೂ ಸ್ವಂತ ತಂದೆಯ ದೇಹ ಛೇದನ ಮಾಡಿ ವೈದ್ಯ ವಿದ್ಯಾರ್ಥಿಗಳಿಗೆ ಪ್ರತ್ಯಕ್ಷ ಪಾಠ ಮಾಡಿ ಗಿನ್ನಿಸ್ ರೆಕಾರ್ಡ್ ಮಾಡಿದ ಡಾ. ಮಹಾಂತೇಶ ರಾಮಣ್ಣವರ ಡಾ.ರಾಮಣ್ಣವರ ಟ್ರಸ್ಟ್ ವತಿಯಿಂದ ಅವರ ದೇಹವನ್ನು ಬೆಳಗಾವಿಯ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಬಿಮ್ಸ್) ಹಾಗೂ ಅವರ ಚರ್ಮವನ್ನು ಕೆ.ಎಲ್.ಇ ಯ ರೋಟರಿ ಸ್ಕಿನ್ ಬ್ಯಾಂಕಗೆ ದಾನ ಮಾಡುವುದಾಗಿ ತಿಳಿಸಿದರು. ದೇಹದಾನ ಮತ್ತು ಚರ್ಮದಾನದ ಬಗ್ಗೆ ಗ್ರಾಮದ ಜನರಲ್ಲಿ ಜಾಗೃತಿ ಮೂಡಿಸಿದರು.

ವ್ಯಕ್ತಿ ಮರಣಾನಂತರದ ಆರು ಘಂಟೆಗಳೊಳಗೆ ಚರ್ಮವನ್ನು ದಾನ ಮಾಡಬಹುದು. ದೇಹದ ಕಾಲು ,ತೊಡೆಯ ಭಾಗದಿಂದ ಚರ್ಮವನ್ನು ಪಡೆಯಲಾಗುತ್ತದೆ. ಚರ್ಮದಲ್ಲಿ ಹಲವು ಪದರಗಳಿರುತ್ತವೆ. ಅತ್ಯಂತ ಮೇಲ್ಪದರವನ್ನು ಮಾತ್ರ ಪಡೆಯಲಾಗುತ್ತದೆ. ಚರ್ಮ ತೆಗೆದ ಭಾಗದಿಂದ ರಕ್ತ ಸ್ರಾವ ಉಂಟಾಗುವುದಿಲ್ಲ ಮತ್ತು ದೇಹವು ವಿರೂಪಗೊಳ್ಳುವುದಿಲ್ಲ. ಬೆಂಕಿ ಅವಘಡಗಳಿಂದ ಆದ ಸುಟ್ಟಗಾಯಗಳಾಗಿ ನರಳುತ್ತಿರುವವರಿಗೆ, ಅಸಿಡ್ ದಾಳಿ, ಸಿಲೆಂಡರ್ ಸ್ಟೋ ಸ್ಪೋಟ್, ವಿದ್ಯುತ್ತನಿಂದ ಸುಟ್ಟ ಪ್ರಕರಣಗಳಲ್ಲಿ ಗಾಯಾಳುಗಳಿಗೆ ಇಂಥ ಚರ್ಮವನ್ನು ಗಾಯದ ಮೇಲೆ ಇಡುವುದರಿಂದ ಶೀಘ್ರ ಗುಣಮುಖರಾಗುತ್ತಾರೆ. ದಾನಿಗಳಿಂದ ಸಂಗ್ರಹಿಸಿದ ಚರ್ಮವನ್ನು ವ್ಶೆಜ್ಞಾನಿಕವಾಗಿ ಸಂಸ್ಕರಿಸಿ ಗಾಯಾಳುಗಳಿಗೆ ಉಪಯೋಗಿಸಲಾಗುವುದು. ಇತ್ತೀಚಿಗೆ ಪ್ರಾರಂಭವಾದ ಕೆ.ಎಲ್ಇ ಯ ರೋಟರಿ ಸ್ಕಿನ್ ಬ್ಯಾಂಕ್ ಗೆ ೬ ಜನರು ಚರ್ಮದಾನ ಮಾಡಿದ್ದು ಡಾ ರಾಮಣ್ಣವರ ಟ್ರಸ್ಟ್ ನ ವತಿಯಂದ ೪ ಜನ ಚರ್ಮದಾನ ಮಾಡಿದ್ದಾರೆ. ಮರಣಾನಂತರವೂ ಅವಶ್ಯಕ ವ್ಯಕ್ತಿಗಳಿಗೆ ಅಂಗಗಳನ್ನು ಕಸಿಮಾಡಿ ನೊಂದವರ ಬಾಳಿಗೆ ಬೆಳಕಾಗಿ ಸಾವಿನಲ್ಲಿಯೂ ಜೀವನ ಸಾರ್ಥಕ್ಯ ಪಡೆಯಲು ದೇಹ,ಅಂಗಾಂಗಳ ದಾನ ಮಾಡಬೇಕು ಎಂದು ದೇಹ ದಾನ, ಅಂಗಾಂಗಳ ದಾನದ ಕುರಿತು ಡಾ.ರಾಮಣ್ಣವರ ಜನರಲ್ಲಿ ಜಾಗೃತಿ ಮೂಡಿಸಿದರು.

ನಿವೃತ್ತ ಶಿಕ್ಷಕ ಹಾಗೂ ಪತ್ರಕರ್ತ ಈಶ್ವರ ಜಿ.ಸಂಪಗಾವಿ ದೇಹದಾನ ಹಾಗೂ ಚರ್ಮದಾನದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂತ್ಯಕ್ರಿಯೆಯಲ್ಲಿ ನಾಗಪ್ಪಾ ಮಿಟಗಾರ, ಈರಪು ಮಾಟೊಳ್ಳಿ, ಚಂದ್ರಗೌಡ ಪಾಟೀಲ, ರವೀಂದ್ರ ಬಾಗೇವಾಡಿ, ಚಂಬನಗೌಡ ಪಾಟೀಲ, ನೀಲಕಂಠ ಉಳವಿ, ಶೆಕಪ್ಪಾ ಹಲಸಗಿ, ಮುಂತಾದ ಲಿಂಗನಮಠ,ಕಕ್ಕೇರಿ, ಅಳನಾವರ ಮತ್ತು ಸುತ್ತಲಿನ ಗ್ರಾಮಗಳ ಜನರು ಭಾಗವಹಿಸಿದ್ದರು.